ಕಲ್ಪ ಮೀಡಿಯಾ ಹೌಸ್ |
ಶಿವಮೊಗ್ಗ |
ಭದ್ರಾವತಿ ಆಕಾಶವಾಣಿಯಲ್ಲಿ Bhadravathi Akashavani ಎಫ್ಎಂ ರೇಡಿಯೋ FM Radio ಆರಂಭಿಸುವ ಭರವಸೆ ಕೊಟ್ಟಿದ್ದೆವು. ಅದರ ಪ್ರತಿಫಲವಾಗಿ ಮಲೆನಾಡಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದ್ಯತೆ ನೀಡಿದೆ. 10 ಕೋಟಿ ರೂ. ಮಂಜೂರಾತಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಕಿ.ವ್ಯಾ. ಪ್ರಸ್ತುತ ಆಕಾಶವಾಣಿ ಭದ್ರಾವತಿ ಹೊಂದಿದೆ. ಈಗ 10 ಕಿ.ವ್ಯಾ. ಟ್ರಾನ್ಸ್ ಮಿಟರ್ ಅಳವಡಿಕೆ ಅನುಮತಿ ನೀಡಿದೆ. ಇದರಿಂದ ಜಿಲ್ಲೆ ಸೇರಿದಂತೆ ನೆರೆಯ ಎಲ್ಲ ಜಿಲ್ಲೆಗಳಲ್ಲಿ ಪ್ರಸಾರಕ್ಕೆ ಅನುಕೂಲವಾಗಲಿದೆ ಎಂದರು.
ಭದ್ರಾವತಿ ಆಕಾಶವಾಣಿ ಗೋಪುರ 100 ಮೀಟರ್ ಎತ್ತರವಿದೆ. ಆದರೆ ಶಿವಮೊಗ್ಗದ ದೂರದರ್ಶನ ಗೋಪುರ 150 ಮೀಟರ್ ಎತ್ತರವಿದೆ. ಹೀಗಾಗಿ ದೂರದರ್ಶನದ ಗೋಪುರದ ಮೇಲೆ ಟ್ರಾನ್ಸ್ ಮೀಟರ್ ಅಳವಡಿಸಲಾಗುತ್ತದೆ. ಡಿಸೆಂಬರ್ ಒಳಗಾಗಿ ಹೊಸ 10 ಕಿ.ವ್ಯಾ. ಟ್ರಾನ್ಸ್ ಮೀಟರ್ ಅಳವಡಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗುತ್ತದೆ. ಅಲ್ಲದೆ ಹೆಚ್ಚುವರಿ ಸಿಬ್ಬಂದಿ, ಅಧಿಕಾರಿಗಳ ನೇಮಕಾತಿ ನಡೆಯಲಿದೆ ಎಂದರು.
ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, 250 ಕೋಟಿ ರೂ ವೆಚ್ಚದಲ್ಲಿ 250 ಮೊಬೈಲ್ ನೆಟ್ ವರ್ಕ್ ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಎನ್ಒಸಿ ಬೇಕಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಟವರ್ ಅಳವಡಿಕೆ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
