ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ನೆಹರೂ ಕ್ರೀಡಾಗಣದಲ್ಲಿ ಮಾರ್ಚ್ ೨೭ರ ನಾಳೆ ಒಂದು ದೇಶ ಒಂದು ಚುನಾವಣೆ ಕಾರ್ಯಕ್ರಮ ನಡೆಯಲಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ ಎಂದು ನರೇಂದ್ರ ಮೋದಿ ವಿಚಾರಮಂಚ್‌ನ ರಾಜ್ಯಾದ್ಯಕ್ಷ ಸಂತೋಷ್ ಬಳ್ಳಾಕೆರೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಕ್ಷಾತೀತವಾಗಿ ಕಾರ್ಯಕ್ರಮ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ರಾಷ್ಟ್ರೀಯ ಯುವ ಮಂಚ್‌ನ ರಾಷ್ಟ್ರಾಧ್ಯಕ್ಷ ರವಿ ಚಾಣಕ್ಯ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದರು.
ಸದಸ್ಯ ಹರಿಕೃಷ್ಣ ಮಾತನಾಡಿ, ಚುನಾವಣಾ ನೀತಿ ಆಯೋಗವು ದೇಶದಲ್ಲಿ ಒಂದೇ ಚುನಾವಣೆ ಮಾಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಸಹ ಈ ವಿಚಾರದಲ್ಲಿ ಆಸಕ್ತಿ ವಹಿಸಿ ಪ್ರಸ್ತಾಪ ಮಾಡಿದ್ದಕ್ಕೆ ವಿಷಯ ಮುಂಚೂಣಿಯಲ್ಲಿದೆ. ಎಲ್ಲಾ ರಾಜ್ಯದ ವಿಧಾನ ಸಭೆಯಲ್ಲಿ ಈ ಕುರಿತು ಚರ್ಚೆ ಆಗಿದೆ ಎಂದರು.
ಈ ಪ್ರಸ್ತಾಪವನ್ನು ಎಲ್ಲರೂ ಒಪ್ಪಬೇಕು ಎಂದು ಒತ್ತಾಯ ಪಡಿಸುವುದಿಲ್ಲ. ಆದರೆ ಈ ಕುರಿತಾದ ಸಾಧಕ ಬಾಧಕಗಳ ಸಾರ್ವಜನಿಕ ಚರ್ಚೆ ಆಗಲಿ ಎಂಬುದು ನಮ್ಮ ಆಶಯವಾಗಿದ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನರೇಂದ್ರ ಮೋದಿ ವಿಚಾರ ಮಂಚ್ ನ ಸದಸ್ಯರಾದ ದೀನ್ ದಯಾಳು, ಚಂದ್ರಶೇಖರ್, ಸುರೇಖಾ ಮುರುಳೀಧರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post