ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನ ನಿಲ್ದಾಣ ಆರಂಭವಾದ ನಂತರ ನೆರೆಯ ಜಿಲ್ಲೆಗಳನ್ನು ನಮ್ಮೊಂದಿಗೆ ಸೇರಿಸಿಕೊಂಡು ಶಿವಮೊಗ್ಗವನ್ನು ಕೇಂದ್ರವಾಗಿರಿಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಎಲ್ಲ ಪ್ರಯತ್ನಗಳು ನಡೆದಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿಯಾಗಿ ಶಿವಮೊಗ್ಗದ ಸುಮಾರು 25ರಿಂದ 30 ಪ್ರವಾಸಿ ಸ್ಥಳಗಳ ವಿವರವನ್ನು ಸಲ್ಲಿಸಲಾಗಿದೆ. ಬಂಡವಾಳದಾರರ ಸಮಾವೇಶದ ರೀತಿಯಲ್ಲೇ ದೇಶದಲ್ಲಿರುವ ಪ್ರಮುಖ ಟೂರಿಸಂ ಏಜೆಂಟ್ ಹಾಗೂ ಗೈಡ್’ಗಳನ್ನು ಇಲ್ಲಿಗೆ ಕರೆತಂದು ಶಿವಮೊಗ್ಗ ಜಿಲ್ಲೆ ಪರಿಚಯ, ಪ್ರವಾಸೋದ್ಯಮಕ್ಕೆ ಇರುವ ವಿಫುಲ ಅವಕಾಶಗಳು, ಇದರೊಂದಿಗೆ ಚಿತ್ರದುರ್ಗ, ಚಿಕ್ಕಮಗಳೂರು, ಕರಾವಳಿ ಜಿಲ್ಲೆಗಳನ್ನು ಶಿವಮೊಗ್ಗದೊಂದಿಗೆ ಜೋಡಿಸಿಕೊಂಡು ಟೂರಿಸಂ ಶೋ ನಡೆಸುವಂತೆ ಕೋರಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದರು.
Also read: ಈ ಎರಡು ಕಂಪೆನಿಗಳ ವಿಮಾನ ಶಿವಮೊಗ್ಗದಲ್ಲಿ ಹಾರಬಹುದು? ಯಾವು ಅವೆರಡು? ಇಲ್ಲಿದೆ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post