ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ನಗರದ ವಿನೋಬನಗರದ ಆರನೇ ತಿರುವು 30ಅಡಿ ರಸ್ತೆಯಾಗಿದ್ದು, ಸದರಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದ ಅಲ್ಲಿನ ನಿವಾಸಿಗಳಿಗೆ ವಾಯುಮಾಲಿನ್ಯ, ಶಬ್ಧಮಾಲಿನ್ಯ ಹಾಗೂ ಅಪಘಾತಗಳಾಗುವ ಸಂಭವವಿರುವುದರಿಂದ ಭಾರೀ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ಈ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಿನೋಬನಗರದ ಮೊದಲನೇ ಹಂತದ 6ನೇ ತಿರುವಿನಲ್ಲಿ ಸಂಚರಿಸುವ ಭಾರೀ ವಾಹನಗಳು ಈ ಮಾರ್ಗದ ಬದಲಾಗಿ ಕೆ.ಇ.ಬಿ. ಸಮೀಪವಿರುವ 60ಅಡಿ ರಸ್ತೆಯ ಮುಖಾಂತರ ಹಾಗೂ ಲಕ್ಷ್ಮೀ ಚಿತ್ರಮಂದಿರದ ಸಮೀಪದಲ್ಲಿ ಇರುವ ತುಂಗಾ ಚಾನಲ್ ಹಿಂಭಾಗದ ರಸ್ತೆಯ ಮುಖಾಂತರ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post