ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ #Renukaswamy Murder Case ದರ್ಶನ್ #Darshan ಗ್ಯಾಂಗ್ ನಲ್ಲಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಜೈಲಿಗೆ ವರ್ಗಾಯಿಸಲಾಗಿದೆ.
ನಿನ್ನೆ ಕೋರ್ಟ್ ಕಲಾಪ ಮುಗಿಸಿಕೊಂಡ ದರ್ಶನ್ ಗ್ಯಾಂಗ್ ನಲ್ಲಿದ್ದ ಸುಮಾರು 17 ಜನ ಆರೋಪಿಗಳನ್ನ ಮೈಸೂರು, ವಿಜಯಪುರ, ಕಲ್ಬುರ್ಗಿ, ಧಾರವಾಡ, ಶಿವಮೊಗ್ಗ ಜೈಲಿಗೆ ವರ್ಗಾಯಿಸಲಾಗಿದೆ. ಎ-13 ಲಕ್ಷಣ್ ಹಾಗೂ ಎ-6 ಜಗದೀಶ್ ರನ್ನ ಬೆಂಗಳೂರು ಜೈಲಿನಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದ್ದು, ಪವಿತ್ರಗೌಡ ಮತ್ತೋರ್ವ ಸೇರಿ ಬೆಂಗಳೂರಿನ ಪರಪ್ಪನ ಜೈಲಿನಲ್ಲಿ ಉಳಿದುಕೊಂಡಿದ್ದಾರೆ.
Also read: ಸ್ಟೈಲ್ ಆಗಿ ಜೈಲಿಗೆ ಎಂಟ್ರಿ, ಹೊಸ ವಿವಾದಕ್ಕೆ ಗುರಿಯಾದ ದರ್ಶನ್
ಪರಪ್ಪನ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳು ಮತ್ತು ಸಜಾಬಂಧ ಖೈದಿಗಳ ಜೊತೆ ಸೇರಿ ಜೈಲಿನ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ದರ್ಶನ್ ಅವರನ್ನ ಬಳ್ಳಾರಿಗೆ ಶಿಫ್ಟ್ ಮಾಡಿದರೆ ಆತನ ಸಹಚರರನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








