ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಶ್ರೀ ಶೃಂಗೇರಿ ಶಂಕರ ಮಠ ಹಾಗೂ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಮೇ 21ರ ಭಾನುವಾರ “ಉದಯಾಸ್ತಮಾನ ಯುವಸಂಗೀತೋತ್ಸವ”ವನ್ನು ಆಯೋಜಿಸಲಾಗಿದೆ.
ಶಂಕರಮಠದ ಆವರಣದಲ್ಲಿರುವ ಶ್ರೀ ಅಭಿನವ ವಿದ್ಯಾತೀರ್ಥ ಸಭಾ ಭವನದಲ್ಲಿ ಸೂರ್ಯೋದಯದಿಂದ (ಬೆಳಿಗ್ಗೆ 6ಗಂಟೆ) ಸೂರ್ಯಾಸ್ತದವರೆಗೆ (ಸಂಜೆ 6:48) ರಾಜ್ಯದ ಉದಯೋನ್ಮುಖ ಯುವ ಕಲಾವಿದರುಗಳಿಂದ ನಿರಂತರ 13 ಗಂಟೆಗಳ ಕಾಲ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿಗಳಾದ ಡಾ. ಪಿ. ನಾರಾಯಣ್ ಉದ್ಘಾಟಿಸಲಿದ್ದಾರೆ.
ಹಾಡುಗಾರಿಕೆಯಲ್ಲಿ ಹಂಸಿನಿ ನಾಗರಾಜ್, ದ್ಯುತಿ ಎಸ್, ಮಹಿಮಾ ಜೋಯ್ಸ್, ಅಂಜನ್ ವಿ. ಶ್ಯಾನ್ ಭೋಗ್, ಭಾಗ್ಯಶ್ರೀ ಎನ್.ಎಂ., ಸೌಜನ್ಯ ಬಿ. ಆರ್, ಮೈತ್ರೇಯಿ ಎಂ, ಹರಿ ಬಿ. ಜೆ., ಹಾಗೂ ನವ್ಯರತ್ನ ರವರು ಭಾಗವಹಿಸಲಿದ್ದು, ವೀಣಾವಾದನದಲ್ಲಿ ವೈಷ್ಣವಿ ಟಿ.ಎಸ್., ವೇಣುವಾದನದಲ್ಲಿ ಶ್ರೀವತ್ಸ ಹಾಗೂ ತಾಳವಾದ್ಯದಲ್ಲಿ ಪ್ರವೀಣ್ ಕೆ, ನಿರಂಜನ್, ವಿಶ್ರುತ್, ಆದಿತ್ಯ ಹಾಗೂ ಸುಜನ್ ಭಾಗವಹಿಸಲಿದ್ದಾರೆ.
ಪಕ್ಕವಾದ್ಯದಲ್ಲಿ ಪಿಟೀಲು ಸಹಕಾರವನ್ನು ವಿದ್ವಾಂಸರುಗಳಾದ ಮಧು ಮುರಳಿ, ಮತ್ತೂರು, ಎಂ. ಇ. ನಟರಾಜ್, ಕೊಪ್ಪ ಹಾಗೂ ಸೂರ್ಯ ಹೆಚ್.ಎಸ್. ನೀಡಲಿದ್ದು, ವಿದ್ವಾಂಸರುಗಳಾದ ಅರವಿಂದ ಹೊಳ್ಳ, ರಾಜೀವ ಮತ್ತೂರು, ನರೇಂದ್ರ, ಶ್ರೀನಿಧಿ ಬಿ. ಜಿ. ಹಾಗೂ ಅಪ್ರಮೇಯ ಹೆಚ್. ಎಸ್. ಮೃದಂಗ ಸಹಕಾರ ನೀಡಲಿದ್ದಾರೆ.
ನಗರದ ಹಿರಿಯ ಸಂಗೀತ ವಿದ್ವಾಂಸರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಕಲಾಸಕ್ತರು, ಸಂಗೀತದ ವಿದ್ಯಾರ್ಥಿಗಳು ಆಗಮಿಸಿ, ಆಸ್ವಾದಿಸಬೇಕಾಗಿ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಪ್ರಾಂಶುಪಾಲರಾದ ಜಿ. ಅರುಣ್ ಕುಮಾರ್ ರವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98444-44820, 94486-65936 ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post