ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಗ್ರೀನ್ ವೀವ್ ಕ್ಲಾರ್ಕ್ಸ್ ಇನ್ ಹೋಟೆಲ್ ನಲ್ಲಿ ಜ. 20 ರಿಂದ 23 ರ ವರೆಗೆ ಡೆಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್ ನಡೆಯಲಿದೆ ಎಂದು ಆಯೋಜಕ ಸೈಯದ್ ಅಯೂಬ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಫೆಸ್ಟಿವಲ್ ಅನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕಾರಾಗೃಹದಲ್ಲಿ ಕಳ್ಳರು ಸದ್ದು ಮಾಡುತ್ತಿದ್ದಾರೆ ಎಂಬ ಹೊಸ ಆಲೋಚನೆಯಲ್ಲಿ ಈ ಹಬ್ಬ ಆಚರಿಸುತ್ತಿದ್ದು, ಡೆಲ್ಲಿಯಲ್ಲಿ ಸುಪ್ರಸಿದ್ಧವಾದ ಚಾಟ್ಸ್ ಮತ್ತು ಸ್ವೀಟ್, ಲಸ್ಸಿ, ದೇಸಿ ಅಡುಗೆಗಳು ಲಭ್ಯವಿರುತ್ತವೆ. ಸ್ವಾದಿಷ್ಟಕ್ಕೆ ಇದು ಹೆಸರಾಗಿದೆ. ಮೊದಲ ಬಾರಿಗೆ ಜೈಲ್ ಕಾನ್ಸೆಪ್ಟ್ ಥೀಮ್ ನೊಂದಿಗೆ ಹೋಟೆಲ್ ಒಳಾಂಗಣ ಶೃಂಗರಿಸಲಾಗಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈ ತಿನಿಸು ಸ್ವಾದಿಸಲು ಅವಕಾಶವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶೀಶ್ ಧವನ್ ಇದ್ದರು.
Also read: ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಶಿವಮೊಗ್ಗದ ಹ್ರಿಧಾನ್, ಸಂಚಿತ್ ಆಯ್ಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post