ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಧರ್ಮಸ್ಥಳ ಭಕ್ತಿ ಮತ್ತು ಶಕ್ತಿಯ ಕೇಂದ್ರ. ಯಾವ ರಾಜಕಾರಣಿಗಳು ಇಲ್ಲಿ ಆಣೆಗೆ ಸಂಬಂಧಿಸಿದಂತೆ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಕೂಡದು. ಭಕ್ತಿಯನ್ನು ಒರಗೆ ಹಚ್ಚುವುದು ಮಹಾಪಾಪ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ರೂಪದಲ್ಲಿ ಎಚ್ಚರಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‍ನ ಹಲವು ಶಾಸಕರು ಅಡ್ಡಮತ ಹಾಕಿರುವುದು ಸ್ಪಷ್ಟವಾಗಿಯೇ ಇದೆ. ಇದು ಭ್ರಷ್ಟಾಚಾರದ ಮುಂದುವರೆದ ಭಾಗವೇ ಆಗಿದೆ. ಪಾಪಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಯಾರು ಅಡ್ಡಮತ ಹಾಕಿದ್ದಾರೆ ಎಂದು ಕಂಡು ಹಿಡಿಯಲು ಧರ್ಮಸ್ಥಳಕ್ಕೆ ಕರೆದು ಪ್ರಮಾಣ ಮಾಡುವಂತೆ ಹೇಳಿದ್ದಾರೆ ನಿಜ. ಆದರೆ ಇದು ತಪ್ಪು. ಧರ್ಮಸ್ಥಳವೂ ಭಕ್ತಿಯ ಕೇಂದ್ರವಾಗಿದ್ದು, ಭಕ್ತಿಯನ್ನು ಈ ರೀತಿಯ ಕನಿಷ್ಠಮಟ್ಟಕ್ಕೆ ಇಳಿಸಬಾರದು ಎಂದರು.
ಈ ರೀತಿಯ ಆಣೆ ಪ್ರಮಾಣಕ್ಕೆ ಉದಾಹರಣೆಯೊಂದನ್ನು ಹೇಳಿದ ಅವರು, ನಗರಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೋರ್ವ ಐದು ರೂ.ಕೊಟ್ಟು ಸಿಗಂಧೂರು ದೇವಿಯ ಭಾವಚಿತ್ರ ಇಟ್ಟು ಮತಹಾಕುವಂತೆ ಕೋರಿದ ಅದನ್ನು ಮತದಾರರು ಪಡೆದರು. ಆದರೆ ಮರುದಿನವೂ ಎದುರಾಳಿ ಅಭ್ಯರ್ಥಿ ಮಾರಿಕಾಂಬೆಯ ಫೋಟೋ ಕೊಟ್ಟು 10 ರೂ.ಕೊಟ್ಟ ಮತದಾರರಿಗೆ ನೀಡಿದ 5 ರೂ. ಪಡೆದ ಮತದಾರರು ತಪ್ಪೊಪ್ಪಿಕೊಂಡು 10 ರೂ.ಕೊಟ್ಟ ಅಭ್ಯರ್ಥಿಗೇ ಓಟು ಹಾಕಿದರು. 10 ರೂ. ಕೊಟ್ಟವನೇ ಗೆದ್ದ ಎಂದು ಹಾಸ್ಯದ ಮೂಲಕವೇ ಭ್ರಷ್ಟಾಚಾರವನ್ನು ಟೀಕಿಸಿದರು.
Also read: ಮಂಗಳೂರು: ಲಾರಿಗೆ ಬೈಕ್ ಡಿಕ್ಕಿ – ಯುವಕ ಸ್ಥಳದಲ್ಲೇ ಸಾವು
ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿಸಿದ್ದು ನಿಜ
ಇದೇ ಸಂದರ್ಭದಲ್ಲಿ ಪ್ರತಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಹಿಂದೆ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್‍ನ 17 ಶಾಸಕರು ಬಂದಿದ್ದು ನಿಜ. ಇವರಿಗೆ ಬಿಜೆಪಿಯವರು ಹಣಕೊಟ್ಟಿದ್ದು ನಿಜ್. ಮತ್ತೆ ಚುನಾವಣೆಗೆ ನಿಲ್ಲಿಸಿ ಹಣ ಖರ್ಚುಮಾಡಿ ಗೆಲ್ಲಿಸಿದ್ದು ನಿಜ ಎಂದು ಈ ಹಿಂದೆ ನಡೆದ ಪಕ್ಷಾಂತರವನ್ನು ಒಪ್ಪಿಕೊಂಡ ಅವರು, ಬಿಜೆಪಿ ಈ ರೀತಿ ಮಾಡಿದ್ದರಿಂದಲೇ ಮುಂದಿನ ಚುನಾವಣೆಯಲ್ಲಿ ಸೋಲಬೇಕಾಯಿತು. ಮತದಾರ ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಮತ್ತು ಒಪ್ಪುವುದಿಲ್ಲ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಈಗ ಇದು ಮತ್ತೆ ರಿಪೀಟ್ ಆಗುತ್ತದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಪಡೆದು ಅಡ್ಡಮತ ಹಾಕಿದ ಮತ್ತು ಹಣ ಕೊಟ್ಟಿದ್ದು ಕೂಡ ಭ್ರಷ್ಟಾಚಾರದ ಭಾಗವೇ ಆಗಿದೆ. ಈ ಹಿಂದೆ ಬಿಜೆಪಿಗೆ ಆದ ದುಸ್ಥಿತಿಯೇ ಕಾಂಗ್ರೆಸ್ಸಿಗೂ ಆಗಲಿದ್ದು, ಭ್ರಷ್ಟಾಚಾರಕ್ಕೆ ಮತ್ತೆ ನಾಂದಿಹಾಡಿದ ಕಾಂಗ್ರೆಸ್ ಪಕ್ಷವನ್ನು ಜನರು ಸೋಲಿಸುವುದು ಖಚಿತ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















