ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜಗಳು ಸಂಸ್ಥೆಗಳನ್ನು ಹುಟ್ಟುಹಾಕುತ್ತದೆ. ಸಂಸ್ಥೆಗಳು ಸಮಾಜವನ್ನು ಬೆಳೆಸುತ್ತಾ ಹೋಗುತ್ತದೆ. ನಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಟ್ಟಾಗ ದೇಶಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ನೊಳಂಬ ಲಿಂಗಾಯಿತ ವೀರಶೈವ ಸಮಾಜದ ನಂದಿ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಉತ್ತಮ ಶಿಕ್ಷಣ ಪಡೆದು, ಜ್ಞಾನವಂತರಾದಾಗ ಅವರು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾರೆ. ಈ ಮೂಲಕ ದೇಶದ ಅಭಿವೃದ್ಧಿಗೆ ಕಾರಣರಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸಬೇಕು ಮತ್ತು ಭಾರತೀಯ ಸಂಸ್ಕಾರ ಸಂಸ್ಕೃತಿ ಪೂರಕ ಶಿಕ್ಷಣವನ್ನು ನೀಡಬೇಕು ಎಂದರು.
ಕುವೆAಪು ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಡಾ. ಎಸ್.ಎಂ. ಗೋಪಿನಾಥ್ ಮಾತನಾಡಿ, ಕಾಲ ಎಲ್ಲಾ ಪಾಠವನ್ನು ಕಲಿಸುತ್ತದೆ. ಗುರು-ಹಿರಿಯರು, ತಂದೆ-ತಾಯಿಗಳ ಬಾಂಧವ್ಯ ಇಟ್ಟುಕೊಂಡು ಸಮಾಜಮುಖಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎಂದರು.
ಬರೀ ಅಂಕಮಾತ್ರ ಗಣನೆಗೆ ಬರುವುದಿಲ್ಲ. ಜ್ಞಾನವನ್ನು ತುಂಬಿಕೊAಡು ಹೋಗಬೇಕು. ಸೋಲನ್ನು ಧನಾತ್ಮಕವಾಗಿ ತೆಗೆದುಕೊಂಡು ಮುಂಜೆ ಹೆಜ್ಜೆ ಇಡಬೇಕು. ನಿರಾಶರಾಗದೆ ಕ್ರೀಯಾಶೀಲರಾಗಿ ಕಠಿಣ ಪರಿಶ್ರಮಪಟ್ಟರೆ ಫಲ ಸಿಗುವುದು ನಿಶ್ಚಿತ. ನಿಮ್ಮ ಬುದ್ಧಿವಂತಿಕೆಯನ್ನು ಯಾರು ಕೂಡ ಕದಿಯಲಾಗುವುದಿಲ್ಲ. ನಿಮ್ಮಲ್ಲಿರುವ ಜ್ಞಾನ ಮತ್ತು ಯಶಸ್ಸನ್ನು ಇತರರ ಜೊತೆ ಹಂಚಿಕೊಳ್ಳಬೇಕು. ಉತ್ತಮ ಸ್ನೇಹಿತರನ್ನು ಸಂಪಾದಿಸಬೇಕು. ನಮ್ಮ ಜ್ಞಾನವನ್ನು ಇತರರ ಜೊತೆ ಹಂಚಿಕೊAಡಾಗ ನಮ್ಮ ಜ್ಞಾನ ಕೂಡ ಪಕ್ವವಾಗುತ್ತದೆ ಎಂದರು.
ನೊಳಂಬರು ರಾಜ ಮನೆತನದವರು. ಎಲ್ಲಾ ಪ್ರಸಿದ್ಧ ರಾಜರುಗಳಿಗೆ ಹತ್ತಿರವಾಗಿ ಆಡಳಿತದಲ್ಲಿ ಪ್ರಭಾವ ಬೀರಿದವರು. ನಮ್ಮದೇ ಆದ ಇತಿಹಾಸವಿದೆ. ಯಾರು ಅವಮಾನಗಳನ್ನು ಮೆಟ್ಟಿ ನಿಲ್ಲುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.
ನಮ್ಮ ಕಾಲಿನ ಮೇಲೆ ನೆಲೆನಿಂತಮೇಲೆ ಸಮಾಜಮುಖಿಯಾಗಿ ಕೆಲಸ ಮಾಡುವುದು ಮತ್ತು ತಂದೆ-ತಾಯಿ, ಗುರುಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಠ ಅಂಕ ಪಡೆದ 25 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಿ.ಇ.ಯಲ್ಲಿ ರ‍್ಯಾಂಕ್ ವಿಜೇತರಾದ ಕು. ಅನುಕೀರ್ತನಾ ಎಂ.ಬಿ., ಎಂಬಿಎ ರ‍್ಯಾಂಕ್ ವಿಜೇತರಾದ ಕು. ಸೌಂದರ್ಯ, ಕ್ರೀಡಾಪಟು ಕು. ಹೆಚ್.ಎಸ್. ತನುಷ್, ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಬಿ. ನಾಗರಾಜ ಇವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.
ಸಮಾರಂಭದ ಸಾನಿಧ್ಯವನ್ನು ಬೃಹನ್ಮಠ ನಂದಿಗುಡಿಯ ಶ್ರೀ ಶ್ರೀ ಸಿದ್ದರಾಮೇಶ್ವರ ಶಿವಾಚರ‍್ಯ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಡಿ.ಬಿ. ಶಂಕರಪ್ಪ ವಹಿಸಿದ್ದರು. ಜಗದೀಶ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post