ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗೆ ಸಾವಿರಾರು ಸದ್ಭಕ್ತರ ನಡುವೆ ಶ್ರೀಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಿ ಯಶಸ್ವಿಯಾದ ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ ಹಾಗೂ ಭಜನಾ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ಸೆ.1ರ ಸಂಜೆ 5.30ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ #Shri Krishna Janmashtami ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಪರಿಷತ್‍ನ ಕಾರ್ಯದರ್ಶಿ ಶಬರೀಶ್ ಕಣ್ಣನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಂದು ನಗರದ ಎಲ್ಲಾ ಭಜನಾ ಮಂಡಳಿಗಳ ಮಾತೆಯರ ಸಮಕ್ಷಮದಲ್ಲಿ ಸಾಮೂಹಿಕ ಲಕ್ಷತುಳಸಿ ಅರ್ಚನೆ ರಹಿತ ಶ್ರೀ ವಿಷ್ಣು ಸಹಸ್ರನಾಮಪಾರಾಯಣ ನಡೆಯಲಿದೆ. ಲೋಕಕಲ್ಯಾಣಕ್ಕಾಗಿ ನಡೆಯುವ ಈ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಭಾಗವಹಿಸುವ ಮಾತೆಯರು ಸಾಧ್ಯವಾದಷ್ಟು ಬಿಡಿ ತುಳಸಿಯನ್ನು ತಾವೆ ತಂದು ಅರ್ಚಿಸಿ ದೇವರಿಗೆ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ನಂತರ ಕಾರ್ಕಳದ ಸುಪ್ರಸಿದ್ಧ ಭಜನಾಗಾಯಕರಾದ ಸುದರ್ಶನ್ ಕುಂಜತಾಯ ತಂಡದವರಿಂದ ಶ್ರೀಕೃಷ್ಣ ಗಾನ ವೈಭವ-ದಿವ್ಯಸತ್ಸಂಗ (ಸಾಮೂಹಿಕ ಗಾನ ಧ್ಯಾನ ಜ್ಞಾನ) ಕಾರ್ಯಕ್ರಮ ನಡೆಯಲಿದೆ ಎಂದರು.
Also read: ಸೆ.1, 2ರಂದು ಯುನೈಟೆಡ್ ಕಪ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಇದೇ ಸಂದರ್ಭದಲ್ಲಿ 6ರಿಂದ 10 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ಮತ್ತು ರಾಧೆ ವೇಷ ಪ್ರೋತ್ಸಾಹ ಪ್ರವೇಶ ಏರ್ಪಡಿಸಿದ್ದು, ಮಕ್ಕಳನ್ನು ಅಲಂಕರಿಸಿದ ಮಕ್ಕಳೊಂದಿಗೆ ಪೋಷಕರು ಭಾಗವಹಿಸಬಹುದು. ಭಾಗವಹಿಸುವ ಎಲ್ಲಾ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಮಕ್ಕಳ ಹೆಸರನ್ನು ಮೊಬೈಲ್ ಸಂಖ್ಯೆ 9964072793ಕ್ಕೆ ಮುಂಚಿತವಾಗಿ ನೊಂದಾಯಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮವು ವಿನೋಬನಗರ ಶ್ರೀಶನೈಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ದಿ ಆರ್ಟ್ ಆಫ್ ಲೀವಿಂಗ್ ಶಿವಮೊಗ್ಗ ಶಾಖೆ ಸಹಕಾರದೊಂದಿಗೆ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧದ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕೃಷ್ಣಾನಂದ, ಮಮತಾ ಪ್ರಸಾದ್, ನಟರಾಜ್ ಭಾಗವತ್, ರಮೇಶ್ ಸೋಗಾನೆ, ಎಂ.ಶಂಕರ್,ಉಮಾಮೂರ್ತಿ, ರಾಜೇಶ್ವರಿ,ಸುಧೀಂದ್ರ ಕಟ್ಟೆ, ಶ್ರೀಧರ್, ಮೋಹನ್, ಸೂರ್ಯನಾರಾಯಣ್, ವಿಜಯ್‍ಕುಮಾರ್, ಮೋಹನ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post