ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೀತಾ ಶಿವರಾಜ್ ಕುಮಾರ್ Geetha Shivrajkumar ನಿರ್ಮಾಣದ ಮೊದಲ ಚಿತ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ Shivrajkumar ನಟನೆಯ 125ನೇ ಸಿನಿಮಾ ವೇದ Veda ಚಿತ್ರ ತಂಡವು ಇಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ರಾತ್ರಿ 8 ಗಂಟೆಗೆ ಡಿವಿಎಸ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.
ಜ.7ರ ಶನಿವಾರ ಬೆಳಗ್ಗೆ 10.30 ಗಂಟೆಗೆ ಸಿಂಗಾರ ಸಭಾಂಗಣದಲ್ಲಿ ವೇದ ಚಲನಚಿತ್ರ ವೀಕ್ಷಿಸಿದ ರಂಗಭೂಮಿ ಕಲಾವಿದೆಯರು, ಕಾಲೇಜು ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕ ಮಹಿಳೆಯರು, ಹಾಗೂ ಆಯ್ದ ಕೆಲವು ಚಿತ್ರ ವೀಕ್ಷಕ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಕೇವಲ 250 ವೀಕ್ಷರಿಗೆ ಅ ಕಾಶವಿದ್ದು ಪಾಸ್ ಕಡ್ಡಾಯವಿರುತ್ತದೆ. ನಂತರ 12:30 ಗಂಟೆಗೆ ಶಿವಪ್ಪ ನಾಯಕ ಸರ್ಕಲ್‌ಗೆ ಆಗಮಿಸಿ ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಚಿತ್ರತಂಡದ ಎಲ್ಲಾ ನಟ ನಟಿಯರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ತೆರೆದ ವಾಹನದ ಮೂಲಕ ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ ಮೂಲಕ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಆಗಮಿಸಲಿದ್ದಾರೆ.
Also read: ಪರಿಶ್ರಮದಿಂದ ಯಶಸ್ಸು ಸಾಧ್ಯ: ಜಿ.ಎಸ್. ನಾರಾಯಣರಾವ್ ಅಭಿಪ್ರಾಯ
ಚಿತ್ರದ ಯಶಸ್ಸಿಗೆ ಸಹಕರಿಸಿದ ಅಭಿಮಾನಿಗಳು, ಚಿತ್ರ ರಸಿಕರು, ಹಾಗೂ ಸಾರ್ವಜನಿಕರು ಆಶೀರ್ವದಿಸಿರುವುದನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖೆಯಲ್ಲಿ ಆಗಮಿಸುವಂತೆ ವೇದಾ ತಂಡದ ಪರವಾಗಿ ಜಿ.ಡಿ. ಮಂಜುನಾಥ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post