ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಒಡೆಯುವ ನೀಚ ಕೃತ್ಯ ಮತ್ತೆ ನಡೆಸಿದ್ದು, ಈ ಬಾರಿ ವಿನಾಯಕ ನಗರದ ಬ್ಲಡ್ ಬ್ಯಾಂಕ್ ಬಳಿಯಲ್ಲಿ ನಡೆದಿದೆ.
ಬ್ಲಡ್ ಬ್ಯಾಂಕ್ ಬಳಿಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 1 ಆಟೋ, 2 ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ.
ಪ್ರಕರಣ ಕುರಿತಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಇನ್ನು, ಒಂದು ಮಾಹಿತಿಯ ಪ್ರಕಾರ ಗಾಂಜಾ ನಶೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದ್ದು, ಪೊಲೀಸ್ ಮೂಲಗಳು ಇದನ್ನು ಸ್ಪಷ್ಟಪಡಿಸಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post