ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸು ಆರ್ಟಿಕಲ್ 370 ಇಂದು ರದ್ದಾಗಿದೆ, ಅಡ್ವಾಣಿ ಜಿ ಹಾಗೂ ಲಕ್ಷಾಂತರ ಕಾರಸೇವಕರ ಶ್ರಮ ಇಂದು ರಾಮ ಮಂದಿರದ ನಿರ್ಮಾಣವಾಗುತ್ತಿದೆ. ವಿವಿಧ ಐತಿಹಾಸಿಕ ದೇವಾಲಯದ ಪುನರ್ ನಿರ್ಮಾಣದ ಕೆಲಸ ಆಗುತ್ತಿರುವುದನ್ನು ಗಮನಿಸಬಹುದು ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ಶಿವಮೊಗ್ಗ ನಗರ ಬಿಜೆಪಿ ವಾರ್ಡ್ ನಂಬರ್ 10, ರವೀಂದ್ರ ನಗರದ ಪೇಜ್ ಪ್ರಮುಖರ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನಮ್ಮ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪೇಜ್ ಪ್ರಮುಖರಾದ ನಾವು ನಮ್ಮ ವ್ಯಾಪ್ತಿಯಲ್ಲಿ ಬರುವ ಮನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕ ಕೆ. ಎಸ್. ಈಶ್ವರಪ್ಪ ನವರು ಮಾಡಿದ ಅಭಿವೃದ್ಧಿ ಕೆಲಸ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಯನ್ನು ತಿಳಿಸಿ, ಪಕ್ಷದ ಪರವಾಗಿ ಇರುವಂತೆ ನೋಡಿಕೊಳ್ಳೋಣ. ಇಂದು ನಾನು ಒಬ್ಬ ಸಂಸದ್ ಸದಸ್ಯನಾಗಿದ್ದೇನೆ ಎಂದರೆ ಅದು ಕಾರ್ಯಕರ್ತರ ಶ್ರಮ ಎಂದು ತಿಳಿಸಿದರು.
Also read: ಹೊಸಪೇಟೆ| ಭಾರೀ ಮಳೆ ಸೃಷ್ಟಿಸಿದ ಅವಾಂತರ: ಸಂಚಾರಕ್ಕೆ ಅಡ್ಡಿ
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್, ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಬಳ್ಳೆಕೆರೆ ಸಂತೋಷ್, ಶಂಕರ್, ಕಾರ್ಪೋರೇಟರ್ ಆರತಿ, ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post