ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನೆಹರೂ ರಸ್ತೆಯ ಫುಟ್‌ಪಾತ್‌ಗೆ ಅಳವಡಿಸುತ್ತಿದ್ದ ಗ್ರಿಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮದ್ಯಾಹ್ನ ನೆಹರೂ ರಸ್ತೆಯ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಗೋಪಿ ಸರ್ಕಲ್‌ನಿಂದ, ಎಎ ಸರ್ಕಲ್‌ವರೆಗಿನ ನೆಹರೂ ರಸ್ತೆಯ ಎರಡೂ ಭಾಗದಲ್ಲಿ ಅಂತರ ಬಿಡದೇ ಗ್ರಿಲ್ ಅಳವಡಿಕೆಗೆ ಮುಂದಾಗಿದ್ದನ್ನು ಖಂಡಿಸಿದ ಸಮಸ್ತ ವರ್ತಕರು ಪ್ರತಿಭಟನೆಗಿಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರ ಪರವಾಗಿ ಕಿರಣ್ ಆಗಮಿಸಿ, ವರ್ತಕರ ಮನವೋಲಿಸುವ ಮೂಲಕ ನಾಲ್ಕು ಗ್ರಿಲ್‌ಗಳು ಅಂದರೆ 48 ಅಡಿ ನಂತರ 5 ಅಡಿ ಜಾಗ ಬಿಡಲು ಮನವೊಪ್ಪಿಸಿದರು. ಆದರೆ ಸ್ಮಾರ್ಟ್‌ಸಿಟಿ ಕಾರ್ಯಾಪಾಲಕ ಅಭಿಯಂತರ ವಿಜಯಕುಮಾರ್, ಪ್ರಾಣೇಶ್ ಹಾಗೂ ಇತರರು ಇದನ್ನು ಒಪ್ಪಿಕೊಳ್ಳಲೇ ಇಲ್ಲ. ನಂತರ ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವರ್ತಕರ ಹಾಗೂ ಅಧಿಕಾರಿಗಳ ಮಧ್ಯೆ ವಾಕ್ ಸಮರವೇ ನಡೆಯಿತು. ಕಿರಣ್ ಪ್ರಯತ್ನ ಸಫಲವಾದಂತೆನಿಸಿತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಗ್ರಿಲ್ ಅಳವಡಿಕೆಯನ್ನು ನಿಲ್ಲಿಸುವುದಾಗಿ ಅಧಿಕಾರಿಗಳಿಗೆ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post