ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಮತ್ತು ಕೇಂದ್ರ ಸರ್ಕಾರವು ವಿವಿಧ ಹಂತದಲ್ಲಿ ಜನರ ಜೀವನ ಕಟ್ಟುವ ಕೆಲಸವನ್ನು ಮಾಡಿದೆ, ಇದನ್ನು ಮನದಲ್ಲಿ ಇಟ್ಟುಕೊಂಡು ಮತವನ್ನು ಹಾಕಬೇಕಿದೆ. ಯಾವುದೇ ಚುನಾವಣೆಯನ್ನು ನಾವು ನಿರ್ಲಕ್ಷಿಸುವ ಹಾಗಿಲ್ಲ, ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕೂಡ ನಮ್ಮ ಪಕ್ಷವು ದೊಡ್ಡಮಟ್ಟದಲ್ಲಿ ವಿಜಯಶಾಲಿಯಾಗಿದೆ. ಈ ಚುನಾವಣೆಯಲ್ಲಿ ಕೂಡ ಹೆಚ್ಚಿನ ಜಯವನ್ನು ನಾವು ಪಡೆಯುತ್ತೇವೆ, ನಮ್ಮ ಅಭ್ಯರ್ಥಿ ಡಿ. ಎಸ್. ಅರುಣ್ ಅವರು ಮೊದಲ ಸುತ್ತಿನಲ್ಲಿ ಗೆದ್ದು ಬರಲಿ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.
ನಗರದ ಗಾಯಿತ್ರಿ ಕಲ್ಯಾಣ ಮಂದಿರದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರಚಾರ ಸಭೆನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಶಿವಮೊಗ್ಗ ಕ್ಷೇತ್ರದಿಂದ ಅಭ್ಯರ್ಥಿಯಾದ ಡಿ.ಎಸ್ ಅರುಣ್ ಅವರ ಪರ ಸಂಸದರಾದ ಬಿ. ವೈ ರಾಘವೇಂದ್ರ ಅವರು ಮತಯಾಚಿಸಿದರು.
ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜಾನೇಂದ್ರ, ಶಾಸಕ ಅಶೋಕ್ ನಾಯ್ಕ್, ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ. ಆಯನೂರು ಮಂಜುನಾಥ್, ಭಾನುಪ್ರಕಾಶ್,
ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಗ್ರಾಮಾಂತರ ಅಧ್ಯಕ್ಷ ರತ್ನಾಕರ ಶೆಣೈ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತು ಪಕ್ಷದ ಪ್ರಮುಖ ಮುಖಂಡರು ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post