ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಮಗೆ ಪ್ರತಿಷ್ಠೆಯ ಕಣವಾಗಿದ್ದು, ನೂರಕ್ಕೆ ನೂರು ಗೆಲ್ಲುತ್ತೇವೆ. ಕಾಂಗ್ರೆಸ್ ನವರು ಏನೋ ಹೇಳಬೇಕು ಹೇಳ್ತಿದ್ದಾರೆ. ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ BSYadiyurappa ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದ ಎಲ್ಲಾ ಸಮಾಜ ಬೆಂಬಲ ನೀಡುತ್ತಿದ್ದು, ಬೇರೆ ಬೇರೆ ಸಮಾಜದ ಸಭೆ ಮಾಡಲು ಯೋಜನೆ ರೂಪಿಸಿದ್ದೇವೆ ಎಂದರು.

ಸಿದ್ದರಾಮಯ್ಯ Siddaramaiah ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ವಿಪಕ್ಷದ ನಾಯಕ ಅನ್ನುವ ಬಗ್ಗೆ ಅರಿವಿಲ್ಲದೇ ಸಿದ್ದರಾಮಯ್ಯ ಲಿಂಗಾಯತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಜನ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಆಗುತ್ತದೆ. ಆ ರೀತಿ ನಾವು ತಂತ್ರ ಮಾಡುತ್ತಿದ್ದೇವೆ. ಜನ ಈ ಬಾರಿ ಕಾಂಗ್ರೆಸ್ ಗೆ ರಾಜ್ಯದಾದ್ಯಂತ ತಕ್ಕ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

Also read: ಜೆಡಿಎಸ್ ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ: ಶಾಸಕ ಬಂಡೆಪ್ಪ ಖಾಶೆಂಪುರ್
ರಾಹುಲ್ ಗಾಂಧಿಗೆ Rahul Gandhi ತಲೆ ತಿರುಗಿದೆ. ವೀರಶೈವರ ಬಗ್ಗೆ ರಾಹುಲ್ ಗಾಂಧಿಗೆ ಏನು ಗೊತ್ತಿದೆ? ಬಸವಣ್ಣನವರ ತತ್ವ ಸಿದ್ದಾಂತ ಏನು ಗೊತ್ತಿದೆ? ಈಗ ವೀರಶೈವರ ಬಗ್ಗೆ ಏನೋ ತಿಳಿದವರ ರೀತಿ ಮಾತನಾಡುತ್ತಿದ್ದಾರೆ. ಅಮಿತ್ ಶಾ, ಮೋದಿ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕ. ಇದು ಎಲ್ಲಾ ನಡೆಯುವುದಿಲ್ಲ, ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.











Discussion about this post