ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಚಿಕ್ಕಬಳ್ಳಾಪುರದ ನಾಗರ್ಜುನ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಏರ್ಪಡಿಸಿದ ವಿಟಿಯು ಯೂಥ್ ಫೆಸ್ಟ್ – ಯುವೋತ್ಸವ 2023 ಕಾರ್ಯಕ್ರಮದಲ್ಲಿ ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಫರ್ಧೆಗಳಲ್ಲಿ 2 ಚಿನ್ನ, 2 ಬೆಳ್ಳಿ, ಹಾಗೂ 2 ಕಂಚಿನ ಪದಕಗಳನ್ನು ಪಡೆದಿರುತ್ತಾರೆ.
ಪೋಸ್ಟರ್ ಮೇಕಿಂಗ್ ಹಾಗೂ ಕ್ಲೇ ಮಾಡಲಿಂಗ್‌ನಲ್ಲಿ ಮೊದಲ ಬಹುಮಾನ, ಇನ್‌ಸ್ಟಾಲೇಷನ್ ಹಾಗೂ ಮೈಮ್‌ನಲ್ಲಿ ದ್ವಿತೀಯ ಬಹುಮಾನ ಹಾಗೂ ಕಿರುನಾಟಕ ಮತ್ತು ಮಿಮಿಕ್ರಿಯಲ್ಲಿ ತೃತೀಯ ಬಹುಮಾನವನ್ನು ಗಳಿಸಿರುತ್ತಾರೆ.
ಕಾಲೇಜಿನ ವಿವಿಧ ವಿಭಾಗಗಳ 31 ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ 80ಕ್ಕೂ ಹೆಚ್ಚು ಕಾಲೇಜುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರೇರಣಾ ಎಜ್ಯುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್‌ನ ಆಡಳಿತ ಮಂಡಳಿರವರು, ಹಾಗೂ ಮುಖ್ಯ ಆಡಳಿತಾಧಿಕಾರಿ ಡಾ. ನಾಗರಾಜ ಆರ್, ಪ್ರಾಂಶುಪಾಲರಾದ ಡಾ. ಚೈತನ್ಯಕುಮಾರ್ ಎಂ.ವಿ ರವರು ಶುಭಕೋರಿದ್ದಾರೆ.
Also read: ಶಿವಮೊಗ್ಗ ಕ್ಷೇತ್ರದ ಚುನಾವಣೆ | ಈ ಮೂವರೊಳಗೆ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಗೊತ್ತಾ?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















