ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಸೊಂಕು ಕೊಂಚ ಕಡಿಮೆಯಾಗುತ್ತಿದೆ ಎನಿಸುತ್ತಿರುವ ಬೆನ್ನಲ್ಲೇ ಬ್ಲಾಕ್ ಫಂಗಸ್ ಸಹ ಲಗ್ಗೆಯಿಟ್ಟಿದೆ.
ಜಿಲ್ಲೆಯಲ್ಲಿ ಈಗಾಗಲೇ ಇಬ್ಬರಿಗೆ ಈ ಸೋಂಕು ದೃಢಪಟ್ಟಿದ್ದು, 11 ಮಂದಿಯಲ್ಲಿ ಇದರ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. 8 ಮಂದಿ ಮೆಗ್ಗಾನ್ ಹಾಗೂ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಒಬ್ಬರು 60 ವರ್ಷ ಮೇಲ್ಪಟ್ಟವರಾಗಿದ್ದು, ಇನ್ನೊಬ್ಬರು 40 ವರ್ಷದ ಕೆಳಗಿನವರು ಎಂದು ತಿಳಿದುಬಂದಿದೆ.
ಇನ್ನು, ಸೋಂಕು ದೃಢಪಟ್ಟಿರುವ ಇಬ್ಬರಲ್ಲಿ ಒಬ್ಬರು ಶಿವಮೊಗ್ಗ ತಾಲೂಕಿನವರಾಗಿದ್ದು, ಇನ್ನೊಬ್ಬರು ನ್ಯಾಮತಿ ತಾಲೂಕಿನವರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆದಿದ್ದು, ಭದ್ರಾವತಿ ತಾಲೂಕಿನಲ್ಲಿ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.
ಕೊರೋನಾ ಸೋಂಕು ನಿಯಂತ್ರಣಕ್ಕೆ ಹಾಗೂ ಬ್ಲಾಕ್ ಫಂಗಸ್ ಹೆಚ್ಚಿಗೆ ಹರಡದಂತೆ ತಡೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಾಲಿಕೆ, ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಈ ಹಂತದಲ್ಲಿ ನಾಗರಿಕರು ಆಡಳಿತದೊಂದಿಗೆ ಸಹಕಾರ ನೀಡುವುದು ಅತ್ಯಗತ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post