ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯಿಂದ ಎಲ್ಲಾ ಲಾಭ ಪಡೆದು ಈಗ ಹೊರ ಹೋಗಿರುವ ಆಯನೂರು ಮಂಜುನಾಥ್ ಬದ್ಧತೆಯ ಮಾತನಾಡುತ್ತಿಲ್ಲ. ಅವರು ಅದನ್ನು ತಿದ್ದಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ Rudregowda ಕಿವಿಮಾತು ಹೇಳಿದರು.
ಅವರು ಇಂದು ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯನೂರು ಮಂಜುನಾಥ್ #Ayanuru Manjunath ಎಲ್ಲಾ ನಾಲ್ಕು ಮನೆಗಳಲ್ಲೂ ಕೆಲಸ ಮಾಡಿದ್ದಾರೆ. ಅದು ಬಿಜೆಪಿಯ ಕೊಡುಗೆಯೇ ಆಗಿದೆ. ಆದರೆ, ಈಗ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರ #B S Yadiyurappa ಪರವಾಗಿ ಕಳಕಳಿ ವ್ಯಕ್ತಪಡಿಸುವಂತೆ ಮಾತನಾಡುವುದರ ಹಿಂದೆ ಕುಹಕವಿದೆ ಎಂದರು.
ಯಡಿಯೂರಪ್ಪನವರು ಬಿಜೆಪಿಯನ್ನು ಇಡೀ ರಾಜ್ಯದಲ್ಲಿ ಬಲವಾಗಿ ಕಟ್ಟಿದವರು. ಹೋರಾಟದಲ್ಲಿ ತೊಡಗಿಕೊಂಡವರು. ಮೋದಿ ಹೇಳಿದಂತೆ ತನ್ನ ಯವ್ವನವನ್ನೇ ಧಾರೆ ಎರೆದು ಪಕ್ಷ ಕಟ್ಟಿದ್ದಾರೆ. ಇಂತಹವರ ಬಗ್ಗೆ ಆಯನೂರು ಮಾತನಾಡುತ್ತಿರುವುದು ವಿಷಾದನೀಯವಾಗಿದೆ. ಅವರ ಮಕ್ಕಳಿಗೆ ನಿಮ್ಮ ತಂದೆಯನ್ನು ಹೇಗೆ ರಕ್ಷಣೆ ಮಾಡುತ್ತೀರಾ? ನಿಮ್ಮ ತಂದೆಯನ್ನೇ ರಕ್ಷಣೆ ಮಾಡದವರು ದೇಶವನ್ನು ರಕ್ಷಣೆ ಮಾಡುತ್ತಿರಾ ಎಂದು ಪ್ರಶ್ನೆ ಕೇಳುತ್ತಾರೆ. ಇದು ಅತ್ಯಂತ ನೋವಿನ ವಿಷಯವಾಗಿದೆ. ಒಬ್ಬ ಮಗನಿಗೆ ತಂದೆಯೂ ಮುಖ್ಯ. ಪಕ್ಷವೂ ಮುಖ್ಯವಾಗಿರುತ್ತದೆ ಎಂದರು.
Also read: ನನ್ಮುಂದೆ ಬೆಳೆದ ಹುಡುಗ, ಈಗ ನನ್ನನ್ನೇ ಪ್ರಶ್ನಿಸುವಷ್ಟು ದೊಡ್ಡವನಾಗಿದ್ದಾನೆ | ಈಶ್ವರಪ್ಪ ಹೀಗೆ ಹೇಳಿದ್ದು ಯಾರಿಗೆ
ಆಯನೂರು ಮಂಜುನಾಥ್ ತಮ್ಮ ಕುಹಕದ ಮಾತುಗಳನ್ನು ನಿಲ್ಲಿಸಬೇಕು. ರಾಜಕಾರಣ ಬರುತ್ತದೆ. ಹೋಗುತ್ತದೆ. ಯಾವುದೋ ಉದ್ದೇಶದಿಂದ ಯಾರನ್ನೋ ಟೀಕೆ ಮಾಡುವಾಗ ಎಚ್ಚರದಿಂದ ಇರಬೇಕು ಎಂದ ಅವರು, ಚುನಾವಣೆ ಸಮೀಪಿಸುತ್ತಿದೆ. ನಾವು ಸಾಧನೆಯ ಹಿಂದೆ ಹೋಗುತ್ತಿದ್ದೇವೆ. ಆಯನೂರು ಮಂಜುನಾಥ್ ಸಂಸದರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಚರ್ಚೆಗೂ ಸಿದ್ಧ ಎಂದಿದ್ದಾರೆ. ಖಂಡಿತಾ ಅವರ ಸಾಧನೆಗಳ ಪಟ್ಟಿಯನ್ನೇ ನಾವು ಕೊಟ್ಟಿದ್ದೇವೆ. ಅದರಲ್ಲಿ ಏನು ಸುಳ್ಳಿದೆ ಎಂದು ಹೇಳಿಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಆಯನೂರು ಮಂಜುನಾಥ್ ಸಂಸದ, ಶಾಸಕ, ವಿಧಾನ ಪರಿಷತ್ ಸದಸ್ಯ ಆಗಿದ್ದವರು. ಅವರು ಅಧಿಕಾರದಲ್ಲಿದ್ದಾಗ ಈ ಜಿಲ್ಲೆಗೆ ಏನು ಮಾಡಿದ್ದಾರೆ. ಅವರ ಕೊಡುಗೆ ಏನು? ಎಂದು ಹೇಳಲಿ ಎಂದು ಒತ್ತಾಯಿಸಿದರು.
ಅವರು ಜಾಣ್ಮೆ, ವಾಕ್ಚಾತುರ್ಯ, ಭಾಷೆಯ ಮೇಲಿನ ಹಿಡಿತ ನಾವು ಒಪ್ಪುತ್ತೇವೆ. ಆದರೆ, ಅನಿವಾರ್ಯತೆಗಾಗಿ ವಿಧಾನ ಪರಿಷತ್ ಟಿಕೆಟ್ ಗಾಗಿ ನಮ್ಮ ಪಕ್ಷದ ನಾಯಕರನ್ನು ಟೀಕಿಸುವುದರಲ್ಲಿ ಯಾವ ಅರ್ಥವಿದೆ. ಅವರು ಬಿಜೆಪಿ ಬಿಟ್ಟು ಸ್ಪರ್ಧೆ ಮಾಡಿದಾಗ ಎಷ್ಟು ಓಟು ತೆಗೆದುಕೊಂಡರು ಎಂದು ಜನರಿಗೆ ಗೊತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಬಿ. ಅಶೋಕ್ ನಾಯ್ಕ್, ಕೆ.ಜಿ. ಕುಮಾರಸ್ವಾಮಿ, ಡಾ. ಧನಂಜಯ ಸರ್ಜಿ, ವಿರೂಪಾಕ್ಷಪ್ಪ, ಕೆ.ವಿ. ಅಣ್ಣಪ್ಪ, ಸುರೇಶ್, ಮಲ್ಲೇಶಪ್ಪ, ಗಣೇಶ್, ಆಯನೂರು ಅಣ್ಣಪ್ಪ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post