ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೂ, ಅವರು ನಮ್ಮನ್ನೇ ಟಾರ್ಗೆಟ್ ಮಾಡ್ತಿದಾರೆ. ನಮಗೆ ಬದುಕಲು ಭಯವಾಗ್ದಿದೆ, ನಮಗೆ ರಕ್ಷಣೆ ಕೊಡಿ…. ಇದು ಮತಾಂಧರಿಂದ ದಾಳಿಗೊಳಗಾದ ರಾಗಿಗುಡ್ಡ ನಿವಾಸಿಗಳ ಕಣ್ಣೀರಿನ ಅಳಲು.
ಹೌದು… ಈದ್ ಮಿಲಾದ್ Eid Milad ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಹಾಗೂ ದಾಳಿಯ ಹಿನ್ನೆಲೆಯಲ್ಲಿ ರಾಗಿಗುಡ್ಡದ ನಿವಾಸಗಳಿಗೆ ಬಿಜೆಪಿ ನಾಯಕರ ಸತ್ಯ ಶೋಧನಾ ತಂಡ ಇಂದು ಭೇಟಿ ನೀಡಿದ ವೇಳೆ ಸ್ಥಳೀಯ ಸಂತ್ರಸ್ತರು ಅಳಲು ತೋಡಿಕೊಂಡರು.
ನಾವು ಇಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಯಾರಿಗೂ, ಯಾವತ್ತೂ ತೊಂದರೆ ಕೊಟ್ಟಿಲ್ಲ. ಆದರೆ, ಸುಖಾಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡಿ ತೊಂದರೆ ನೀಡುತ್ತಿದ್ದಾರೆ. ನಮಗೆ ಇಲ್ಲಿ ಬದುಕಲು ಭಯವಾಗುತ್ತಿದೆ. ನಮಗೆ ರಕ್ಷಣೆ ನೀಡಿ ಎಂದು ಬಿಜೆಪಿ ನಾಯಕರ ಮುಂದೆ ಕಣ್ಣೀರು ಹಾಕಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ Nalin Kumar Kateel ನೇತೃತ್ವದ ತಂಡ ರಾಗಿಗುಡ್ಡದಲ್ಲಿ ದಾಳಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆದಿ, ನಿವಾಸಿಗಳಿಂದ ಮಾಹಿತಿ ಕಲೆ ಹಾಕಿದರು.
Also read: ರಾಗಿಗುಡ್ಡ ಕಲ್ಲು ತೂರಾಟ | ಪರಿಹಾರದ ಕುರಿತು ಹಗುರವಾಗಿ ಮಾತನಾಡಿದ ಸಚಿವ ಮಧು: ದತ್ತಾತ್ರಿ ವಾಗ್ದಾಳಿ
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, Araga Gnanendra ಮಾಜಿ ಸಚಿವರಾದ ಅಶ್ವತ್ ನಾರಾಯಣ್, Ashwathnarayan ಕೋಟಾ ಶ್ರೀನಿವಾಸ್ ಪೂಜಾರಿ, Kota Shrinivasa Poojari ಕೆ.ಎಸ್. ಈಶ್ವರಪ್ಪ, Eshwarappa ಸಂಸದ ರಾಘವೇಂದ್ರ, MPRaghavendra ಶಾಸಕ ಎಸ್.ಎನ್. ಚನ್ನಬಸಪ್ಪ(ಚೆನ್ನಿ) MLAChannabasappa ಸೇರಿದಂತೆ ಬಿಜೆಪಿ ನಾಯಕರು ತಂಡದಲ್ಲಿದ್ದಾರೆ.
ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಬಿಜೆಪಿ ನಾಯಕರ ತಂಡ ಮೆಗ್ಗಾನ್ ಆಸ್ಪತ್ರೆಗೆ ತೆರಳಿತ್ತು. ಗಲಭೆ ವೇಳೆ ಗಾಯಗೊಂಡವರನ್ನು ಭೇಟಿಯಾದ ಮುಖಂಡರು, ಆರೋಗ್ಯ ವಿಚಾರಿಸಿ, ಘಟನೆ ಕುರಿತಾಗಿ ಮಾಹಿತಿ ಕಲೆ ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post