ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೀತಾ ಶಿವರಾಜ್ ಕುಮಾರ್ Geetha Shivarajkumar ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ದಯಮಾಡಿ ಆಶೀರ್ವಾದ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ Minister Madhu Bangarappa ಮನವಿ ಮಾಡಿದ್ದಾರೆ.
ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ನಿನ್ನೆ ಆಯೋಜಿಸಿದ್ದ ಶಿವಮೊಗ್ಗ ಲೋಕಸಭ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Also read: ಜಿಲ್ಲೆಯಿಂದ ಲೋಕಸಭೆಗೆ ಹೋದ ಮೊದಲ ಮಹಿಳೆಯಾಗುವ ಅವಕಾಶ ನೀಡಿ: ಗೀತಾ ಶಿವರಾಜಕುಮಾರ್ ಮನವಿ
ಬಂಗಾರಪ್ಪ Bangarappa ಕೊರತೆ ಜಿಲ್ಲಾ, ರಾಜ್ಯದಲ್ಲಿ ಇದೆ. ಬಂಗಾರಪ್ಪ ಧಢ್ವನಿ ಆಗಿ ಗೀತಾ ಇರುತ್ತಾರೆ. ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದ ಅವರು, ಗೀತಾ ಶಿವರಾಜಕುಮಾರ್ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಹದಿನೈದು ವರ್ಷಗಳ ಹಿಂದೆ ರಾಘವೇಂದ್ರ ಏನು ಕಡಿದು ಬಂದಿದ್ರಿ? ಅಪ್ಪ ಮಾಡಿದ ಭ್ರಷ್ಟಾಚಾರ ಹಣದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಮ್ಮಪ್ಪ ಹಡಿಬಿಟ್ಟಿ ದುಡ್ಡು ಮಾಡಿರಲಿಲ್ಲ. ಚೋಟಾ ಸಹಿ ಹಾಕಿ ಜೈಲಿಗೆ ಕಳಿಸಿರಲಿಲ್ಲ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ರಾಜಕೀಯ ಬದಲಾವಣೆ ಆಗಲಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಪ್ರಮುಖರಾದ ಎಚ್.ಎಸ್.ಸುಂದರೇಶ್, ಎಚ್.ಸಿ. ಯೋಗೀಶ್, ನಗರದ ಮಹದೇವಪ್ಪ, ಕಿಮ್ಮನೆ ರತ್ನಾಕರ, ವೈ.ಎಚ್. ನಾಗರಾಜ, ಅನಿತಾ ಕುಮಾರಿ, ಇಸ್ಮಾಯಿಲ್ ಖಾನ್, ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್, ರವಿಕುಮಾರ್, ನಾಗರಾಜ ಗೌಡ, ಶ್ರೀನಿವಾಸ ಕರಿಯಣ್ಣ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post