ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನನಗೆ ಟಿಕೇಟ್ ತಪ್ಪಲ ನಾನು ಮಾಡಿದ ತಪ್ಪಾದರೂ ಏನು? ನಮ್ಮ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೆ.ಈ. ಕಾಂತೇಶ್ K E Kanthesh ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆ ಕುಟುಂಬಕ್ಕೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬ ಮಗ ಎಂಪಿ, ಇನ್ನೊಬ್ಬ ಮಗ ರಾಜ್ಯಾಧ್ಯಕ್ಷ ಹಾಗೂ ಶಾಸಕ. ಆದರೆ, ನಾನು? ನಾನು ಮಾಡಿದ ತಪ್ಪಾದರೂ ಏನು? ನನಗೇನು ಸಿಕ್ಕಿದೆ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.
ನಮ್ಮ ತಂದೆಯವರ 40 ವರ್ಷದ ರಾಜಕಾರಣದಲ್ಲಿ ಕ್ಷೇತ್ರ ಹಾಗೂ ಎಲ್ಲ ಸಮುದಾಯಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರೊಂದಿಗೆ ನಾನೂ ಸಹ ಅಳಿಲು ಸೇವೆ ನೀಡಿದ್ದೇನೆ. ನಮ್ಮ ತಂದೆ ವರ್ಷದ ರಾಜಕೀಯ ಅನುಭವದಲ್ಲಿ ಯಾರಿಗೂ, ಯಾವುದೇ ರೀತಿಯಲ್ಲೂ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.
Also read: ಮುಸ್ಲೀಮರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು | ಜಾವೇದ್ ಅಖ್ತರ್ ಲೇವಡಿ
5-6 ದಿನದಲ್ಲಿ ಬಹುತೇಕ ಎಲ್ಲ ತಾಲೂಕಿನ ಕೆಲವು ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಎಲ್ಲ ಕಡೆಯೂ ನಮ್ಮ ನಿರ್ಧಾರಕ್ಕೆ ಬೆಂಬಲ ದೊರೆತಿದ್ದು, ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post