ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರಾಟೆ ಕ್ರೀಡಾಪಟುಗಳು ಅತ್ಯುತ್ತಮವಾಗಿ ಸ್ಪರ್ಧೆಗಳಲ್ಲಿ ಆಟವಾಡಿ ಉತ್ತಮ ಸಾಧನೆಗೈದು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಕ್ರೀಡಾಪಟುಗಳಿಗೆ ಹಾರೈಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.
ಕರಾಟೆ ಎಂದರೆ ಬ್ರೂಸ್ಲಿ ನೆನಪಾಗುತ್ತಾರೆ. ಬ್ರೂಸ್ಲಿ ಸಿನಿಮಾಗಳನ್ನು ನೋಡಿ ಕರಾಟೆ ಬಗ್ಗೆ ನಾವು ಹೆಚ್ಚು ಆಸಕ್ತಿ ಬೆಳಸಿಕೊಂಡಿದ್ದೆವು. ಇಂದಿನ ಸ್ಪರ್ಧೆಯಲ್ಲಿ ಅವರಂತಹ ಅನೇಕ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಎಲ್ಲರೂ ಉತ್ತಮವಾಗಿ ಆಟವಾಡಬೇಕೆಂದರು.
ಇಂದಿನ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ 1800 ಕರಾಟೆ ಕ್ರೀಡಾಪಟುಗಳು ಹಾಗೂ 60ಕ್ಕೂ ಹೆಚ್ಚು ಜನ ತೀರ್ಪುಗಾರರು ಪಾಲ್ಗೊಂಡಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೆ ಶುಭವಾಗಲಿ. ರಾಜ್ಯದಿಂದ ರಾಷ್ಟ್ರ ಹಾಗೂ ರಾಷ್ಟ್ರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಬೆಳೆಯಬೇಕು. ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಬೇಕೆಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ DSArun ಮಾತನಾಡಿ, ಇತ್ತೀಚೆಗೆ ಅತ್ಯುತ್ತಮ ತರಬೇತುದಾರರು, ರಿಫ್ರಿಗಳು ತಯಾರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಬೇರೆ ಬೇರೆ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಉತ್ತಮ ಸಾಧನೆ ಮಾಡಬೇಕು. ಹಾಗೂ ಇಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಯೂ ನಡೆಯಬೇಕೆಂದು ಆಶಿಸಿದ ಅವರು ಕ್ರೀಡಾಪಟುಗಳಿಗೆ ಶಾಸಕರು, ಇಲ್ಲಿನ ತಂಡ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ನೀಡುವರು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಲೋಕೇಶಪ್ಪ, ಬಿಇಓ ನಾಗರಾಜ್, ಏಷಿಯನ್ ತೀರ್ಪುಗಾರ ಅಲ್ತಾಫ್, ವಿನೋದ್, ರಾಜ್ಯ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳು, ಇತರೆ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















