ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಂತ್ರಿಕ ಕಾರಣದಿಂದ ಕಾರ್ಯಾಚರಣೆ ಮುಂದೂಡಲಾಗಿದೆ. ಆ. 31ರಿಂದ ಶಿವಮೊಗ್ಗದಲ್ಲಿ ವಿಮಾನಯಾನ ಕಾರ್ಯಾರಂಭಿಸಲಿದೆ. ಭದ್ರಾತಾ ಅನುಮತಿ ಕುರಿತಂತೆ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹಾರಾಟ ವಿಳಂಬವಾಗಿದೆ ಎಂದು ಸಂಸದ ರಾಘವೇಂದ್ರ MP Raghavendra ಮಾಹಿತಿ ನೀಡಿದರು.
Also read: ರೇಡಿಯೋ ಪ್ರಿಯರಿಗೆ ಸಿಹಿ ಸುದ್ದಿ: ಶಿವಮೊಗ್ಗದಲ್ಲಿ ಎಫ್’ಎಂ ಆರಂಭದ ಬಗ್ಗೆ ಸಂಸದರ ಮಹತ್ವದ ಹೇಳಿಕೆ
ಶಿವಮೊಗ್ಗ ವಿಮಾನ ನಿಲ್ದಾಣ Shivamogga Airport ಆರಂಭ ವಿಚಾರ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಉಡಾನ್ ಯೋಜನೆಯಡಿ ಎಲ್ಲ ಮೂರು ಮಾರ್ಗಗಳಿಗೆ ಕಂಪನಿಗಳು ಉತ್ಸುಕತೆ ತೋರಿಸಿವೆ. ಸ್ಪೈಸ್ ಜೆಟ್, Space jet ಏರ್ ಅಲಾಯನ್ಸ್, ಸ್ಟಾರ್ ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸಿವೆ. ಗೋವಾ, ಚೆನ್ನೈ, ತಿರುಪತಿ ಮಾರ್ಗ ಉಡಾನ್ ಯೋಜನೆಗೆ ಅನುಮತಿ ದೊರಕಿದೆ. ಮುಂಬೈಗೂ ವಿಮಾನಯಾನ ಆರಂಭಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.












Discussion about this post