ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ Talaguppa-Sirsi-Hubballi railway line ಸಂಬಂಧಿಸಿದಂತೆ ಸರ್ವೇಕಾರ್ಯ ನಡೆಯುತ್ತಿದ್ದು, ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಮಾರ್ಗ ಸೇವಾದೃಷ್ಟಿಯಿಂದ ಅಷ್ಟೊಂದು ಲಾಭದಾಯಕವಲ್ಲದಿದ್ದರೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಕಾರ್ಯಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಗೆ Railway Department ಮನವರಿಕೆ ಮಾಡಿಕೊಟ್ಟು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬೀರೂರು-ಶಿವಮೊಗ್ಗ ನಡುವೆ ರೈಲ್ವೆ ದ್ವಿಪಥ ನಿರ್ಮಾಣಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ. ಬೀರೂರಿನಿಂದ ತಾಳಗುಪ್ಪವರೆಗೆ ಉಪ ಮಾರ್ಗವಷ್ಟೇ ಇದೆ ಎಂದ ಅವರು, ದ್ವಿಪಥ ನಿರ್ಮಾಣಕ್ಕೆ ದ್ವಿಪಥ ನಿರ್ಮಾಣದ ಅನುಮತಿಗೆ ರೈಲ್ವೆ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದರು.
ಶಿವಮೊಗ್ಗ-ಭದ್ರಾವತಿ ನಡುವಿನ ಮಾಚೇನಹಳ್ಳಿಯಲ್ಲಿ ಹೆದ್ದಾರಿ ಕಾಮಗಾರಿ ವಿಳಂಬವಾಗುವುದಕ್ಕೆ ಕೆಲವು ತಾಂತ್ರಿಕ ಕಾರಣಗಳಿವೆ. ಮಲವಗೊಪ್ಪ ಜನರು ಭೂಮಿಬಿಟ್ಟುಕೊಡಲು ನಿರಾಕರಿಸಿದ್ದು ಇದಕ್ಕೆ ಕಾರಣವಾಗುತ್ತಿದೆ. ಮೊದಲನೇ ಹಂತದ ಟೆಂಡರ್ ಕಾಮಗಾರಿ ಮುಗಿದಿದ್ದು ಎರಡನೇ ಹಂತದ ಕಾಮಗಾರಿಯನ್ನು ಇಷ್ಟರಲ್ಲೇ ಆರಂಭಿಸಲಾಗುತ್ತದೆ. ಮಳೆಗಾಲ ಆರಂಭವಾಗುವುದರೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















