ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಶಿಪುರದ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಚುರುಕುಗೊಂಡಿದ್ದು, ಶೀಘ್ರ ಮುಕ್ತಾಯಗೊಳಿಸುವ ಭರವಸೆಯನ್ನು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಕಾಶಿಪುರದ ರೈಲ್ವೆ ಅಂಡರ್ ಪಾಸ್ ವರ್ಕ್ ಬಾಕ್ಸ್ ಕಾಮಗಾರಿಯನ್ನು ವೀಕ್ಷಿಸಿದ ವೇಳೆ ಅವರು ಮಾತನಾಡಿದರು.
ಕಾಶಿಪುರ ರೈಲ್ವೇ ಅಂಡರ್ ಪಾಸ್ ವರ್ಕ್ ಬಾಕ್ಸ್’ಗಳನ್ನು ಯಶಸ್ವಿಯಾಗಿ ಜೋಡಿಸಲಾಗಿದ್ದು, ಇದರಿಂದ ಕಾಮಗಾರಿಯು ಶೀಘ್ರವಾಗಿ ಮುಗಿದು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ನ.೨೦ರAದು ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಕಾಮಗಾರಿಯನ್ನು ಶೀಘ್ರವಾಗಿ ಮಾಡಲು ತಿಳಿಸಿದ್ದರು, ಕೇವಲ ೧೦ ದಿನದಲ್ಲಿ ರೈಲ್ವೇ ಟ್ರಾಕ್ ಅಡಿಯಲ್ಲಿ ಬಾಕ್ಸ್ ಅಳವಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post