ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಸರ್ಕಾರದಲ್ಲಿ ಸೆರೆಮನೆಗಳು ಅರಮನೆಯಂತ್ತಾಗಿವೆ. ಸರ್ಕಾರ ಜೈಲು ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಗೃಹಮಂತ್ರಿ ಅರಗ ಜ್ಞಾನೇಂದ್ರ #Araga Gnanendra ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೈಲುಗಳೇಂದರೆ ಅಪರಾಧಿಗಳ ವಿಶ್ರಾಂತಿ ತಾಣಗಳಾಗಿವೆ. ಅಷ್ಟೇ ಅಲ್ಲ ಉಗ್ರರಿಗೆ ಆಶ್ರಯಕೊಡುವ ಶ್ರೀಮಂತ ಮನೆಗಳಂತ್ತಾಗಿವೆ. ಇದಕ್ಕೆ ಉದಾಹರಣೆ ಎಂದರೆ ಪರಪ್ಪನ ಆಗ್ರಹಾರದಲ್ಲಿ ನಡೆದ ಘಟನೆ. ಇಲ್ಲಿ ನಟೋರಸ್ ಖೈದಿಗಳು ಪಾರ್ಟಿ ಮಾಡುತ್ತಾರೆ. ಕುಡಿಯುತ್ತಾರೆ, ಕುಣಿದು ಕುಪ್ಪಳಿಸುತ್ತಾರೆ. ಅದರ ವಿಡಿಯೋ ದೃಶ್ಯಗಳು ಈಗ ಎಲ್ಲ ಕಡೆ ಬಹಿರಂಗ ಆಗಿವೆ. ಆದರೂ ಕೂಡ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೃಹಮಂತ್ರಿಗಳು ನನ್ನ ಗಮನಕ್ಕೆ ಬಂದಿಲ್ಲ ಎಂಬ ಹಾರಕೆ ಉತ್ತರ ಕೊಡುತ್ತಾರೆ ಎಂದು ದೂರಿದರು.

ಮೊಬೈಲ್‍ಗಳು ಸರಾಗವಾಗಿ ಖೈದಿಗಳ ಕೈಗೆ ಸಿಗುತ್ತವೆ. ಟಿವಿಯಂತ್ತಾಹ ದೊಡ್ಡ ವಸ್ತುಗಳೇ ಜೈಲಿನೊಳಗೆ ಸಾಗಿಸಲಾಗುತ್ತಿದೆ ಎಂದರೆ ಅರ್ಥ ಮಾಡಿಕೊಳ್ಳಬೇಕು. ಇನ್ನೂ ಗಾಂಜಾ, ಹೆಂಡ, ಇವೆಲ್ಲವೂ ಅಲ್ಲಿನ ಅಧಿಕಾರಿಗಳ ಮೂಲಕವೇ ಕೈದಿಗಳಿಗೆ ನೇರವಾಗಿ ಹೋಗುತ್ತವೆ. ಖೈದಿಗಳು ತಿದ್ದು ಉಂಡು, ಕುಣಿದು ಆರಾಮವಾಗಿ ಇರುತ್ತಾರೆ ಎಂದರೆ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಛೀಮಾರಿಯಾಕಿದೆ. ಆದರೂ ಕೂಡ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಎಂದರು.

ನೀವು ಗೃಹಮಂತ್ರಿಯಾಗಿದ್ದಾಗಲೂ ಜೈಲಿನಲ್ಲಿ ಈ ರೀತಿಯ ಘಟನೆಗಳು ನಡೆದಿದ್ದವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸರ್ಕಾರ ಇದ್ದಾಗಲೂ ಕೂಡ ಕೆಲವು ಘಟನೆಗಳು ನಡೆದಿವೆ. ಇಲ್ಲ ಎನ್ನುವುದಿಲ್ಲ. ಆದರೆ ನಾವು ಇಂತಹ ಘಟನೆಗಳು ಆದಾಗ ಎಚ್ಚೆತ್ತುಕೊಂಡು ಅದನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದೆವು. ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೆವು. ಇಂತಹ ಘಟನೆಗಳು ನಡೆಯದಂತ್ತೆ ಕ್ರಮ ತೆಗೆದುಕೊಂಡಿದ್ದೆವು. ಆದರೆ ಈ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post