ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ರಷ್ ಕಟರ್ ಸೈಕಲ್ ಟ್ರಾಲಿ #Brush Cutter Cycle Trolley ಬಳಸುವ ಕುರಿತಾಗಿ ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮಾಹಿತಿ ಅಭಿಯಾನ ನಡೆಯಿತು.
ವಿವಿಯ ಬಿಎಸ್’ಸಿ ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ #Agriculture ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಬ್ರಷ್ ಕಟರ್ ಸೈಕಲ್ ಟ್ರಾಲಿ ಬಳಸುವ ಕುರಿತಾಗಿ ಮಾಹಿತಿ ನೀಡಿದರು.
Also read: ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ (ಬಾಲಿ) ನಿಧನ
ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಎಸ್’ಜಿಬಿ ಕಂಪನಿಯವರು ಬಿಡುಗಡೆ ಮಾಡಿರುವ ಬ್ರಷ್ ಕಟರ್ ಸೈಕಲ್ ಟ್ರಾಲಿಯನ್ನು ಪ್ರದರ್ಶಿಸಿದರು.
ಈ ಟ್ರಾಲಿಗೆ ಎಲ್ಲಾ ರೀತಿಯ ಕಟಿಂಗ್ ಮಷೀನ್’ಗಳನ್ನು ಜೋಡಿಸಿ ಉಪಯೋಗಿಸಬಹುದು. ಇದರ ದರ 4 ಸಾವಿರ ರೂ. ಈ ಟ್ರಾಲಿ ಬಳಸುವುದರಿಂದ ರೈತರು ಮಷೀನ್ ಹೊರುವ ಭಾರವನ್ನು ಕಡಿಮೆ ಮಾಡಬಹುದು. ರೈತ ಮಹಿಳೆಯರು ಕೂಡ ಆರಾಮಾಗಿ ಬಳಸಬಹುದು. ಈ ಅಭಿಯಾನದಲ್ಲಿ ಗ್ರಾಮದ ರೈತರು ಅದನ್ನು ಬಳಸಿ, ಪ್ರಯೋಗ ಮಾಡಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post