ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉದ್ಘಾಟನೆಗೊಂಡು ಮೂರು ತಿಂಗಳು ಕಳೆದರೂ ಇನ್ನೂ ವಿಮಾನ ಹಾರಾಟ ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದ್ದು, ಆಗಸ್ಟ್ 11ರಿಂದ ಮಲೆನಾಡಿಗರು ಶಿವಮೊಗ್ಗದಿಂದ ಗಗನ ಪ್ರಯಾಣ ಮಾಡಬಹುದಾಗಿದೆ.
ಈ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ MP Raghavendra ಇಂದು ಮಾತನಾಡಿದ್ದು, ಆಗಸ್ಟ್ 11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ ಎಂದು ಹೇಳಿದ ಸಂಸದರು, ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಲಾಭ ಆಗಲಿದೆ. ಶಿವಮೊಗ್ಗದಿಂದ ಹಲವಾರು ಜನರು ದೆಹಲಿಗೆ ಸಂಚರಿಸುತ್ತಾರೆ. ಪ್ರವಾಸೋದ್ಯಮ, ಕೈಗಾರಿಕಾ ವಲಯ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದಿದ್ದಾರೆ.
ಯಾವ ವಿಮಾನ ಹಾರಾಟ?
ಆಗಸ್ಟ್ 11ರಿಂದ ಇಂಡಿಗೋ ಸಂಸ್ಥೆಯ ವಿಮಾನ ಶಿವಮೊಗ್ಗದಿಂದ ಹಾರಾಟ ಆರಂಭಿಸಲಿದೆ. ಈಗಾಗಲೇ ಇಂಡಿಗೋ ಜೊತೆಯಲ್ಲಿ ಎಲ್ಲ ಒಡಂಬಡಿಕೆಗಳು ಆಗಿದ್ದು, ಸರ್ಕಾರ ಸಬ್ಸಿಡಿ ನೀಡಿದೆ ಎಂದು ಸಂಸದರು ತಿಳಿಸಿದ್ದಾರೆ.
Also read: ಯಾವಾಗ ಮುಕ್ತಾಯವಾಗಲಿದೆ ಭದ್ರಾವತಿ ರೈಲ್ವೆ ಮೇಲ್ಸೇತುವೆ ಕಾಮಗಾರಿ? ಸಂಸದರು ಹೇಳಿದ್ದೇನು?
ಮೇಕ್ ಮೈ ಟ್ರಿಪ್ ಸೇರಿದಂತೆ ಹಲವು ಅಂತರ್ಜಾಲ ತಾಣಗಳಲ್ಲಿ ಈಗಾಗಲೇ ಕೋಡ್ ಸಹಿತ ಶಿವಮೊಗ್ಗದ ಹೆಸರೂ ಸಹ ಸೇರ್ಪಡೆಗೊಂಡಿದ್ದು, ವಿಮಾನ ಹಾರಾಟ ಸಮಯ ಹಾಗೂ ದರ ಕುರಿತಾಗಿ ಇನ್ನೂ ಮಾಹಿತಿ ಪ್ರಕಟಗೊಂಡಿಲ್ಲ.
ಶಿವಮೊಗ್ಗ ಏರ್ ಪೋರ್ಟ್’ಗೆ ಯಾವ ಕೋಡ್?
ವಿಮಾನ ಹಾರಾಟ ಆರಂಭಕ್ಕೆ ದಿನಾಂಕ ಘೋಷಣೆಯಾಗುವ ಮುನ್ನವೇ ಇಂಟರ್ ನ್ಯಾಶನಲ್ ಕೋಡ್ ಐಎಟಿಎ: ಆರ್’ಕ್ಯೂವೈ ಎಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೀಡಲಾಗಿದೆ.
ಏನಿದು ಕೋರ್ಡ್?
ಐಎಟಿಎ ವಿಮಾನ ನಿಲ್ದಾಣ ಕೋಡನ್ನು ಐಎಟಿಎ ಲೊಕೇಶನ್ ಐಡೆಂಟಿಟಿಫೈಯರ್ ಅಥವಾ ಐಎಟಿಎ ಸ್ಟೇಷನ್ ಕೋಡ್ ಎಂದೂ ಸಹ ಕರೆಯಲಾಗುತ್ತದೆ.
ಇದು ಮೂರು ಅಕ್ಷರದ ಜಿಯೋಕೋಡ್ ಆಗಿದ್ದು, ಪ್ರಪಂಚದಾದ್ಯಂತ ಅನೇಕ ವಿಮಾನ ನಿಲ್ದಾಣಗಳು ಮತ್ತು ಮೆಟ್ರೋಪಾಲಿಟನ್ ಪ್ರದೇಶಗಳನ್ನು ಗುರುತಿಸಲು ಬಳಲಾಗುತ್ತದೆ. ಈ ಕೋಡನ್ನು ಇಂಟರ್ ನ್ಯಾಶನಲ್ ಏರ್ ಟ್ರಾನ್ಸ್’ಪೋರ್ಟ್ ಅಸೋಸಿಯೇಷನ್ ನಿರ್ವಹಿಸುತ್ತದೆ.
ಸಾಮಾನ್ಯವಾಗಿ ಇದರ ಬಳಕೆಗೆ ಉದಾಹರಣೆ ಎಂದರೆ ವಿಮಾನ ನಿಲ್ದಾಣದ ಚೆಕ್-ಇನ್ ಡೆಸ್ಕ್’ಗಳಲ್ಲಿ ಲಗತ್ತಿಸಲಾಗುವ ಬ್ಯಾಗೇಜ್ ಟ್ಯಾಗ್’ಗಳಲ್ಲಿ ಅಕ್ಷರಳ ಮೂಲಕ ಹಾಕುವುದಾಗಿದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post