ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಸಾಯನಿಕ ಗೊಬ್ಬರ #Chemical fertilizers ಬಳಕೆಯಿಂದ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ಮಣ್ಣಿನಲ್ಲಿನ ಸೂಕ್ಷಾö್ಮಣು ಜೀವಿಗಳೂ ಸಹ ಸಾಯುತ್ತವೆ ಎಂದು ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಳೇಮುಗಳಗೆರೆ ಗ್ರಾಮದಲ್ಲಿ ಸಸ್ಯ ರೋಗ ನಿರ್ವಹಣೆಯಲ್ಲಿ ಜೈವಿಕ ನಿಯಂತ್ರಕಗಳ ಮಹತ್ವದ ಕುರಿತು ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ರಾಸಾಯನಿಕ ಗೊಬ್ಬರ ಬಳಕೆ ಇಂದ ಮಣ್ಣು ತನ್ನ ಫಲವತ್ತತೆ #Soil fertility ಕಳೆದುಕೊಳ್ಳುತ್ತಿದೆ ಹಾಗು ಮಣ್ಣಲ್ಲಿನ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ ಆದ್ದರಿಂದ ಜೈವಿಕ ನಿಯಂತ್ರಕಗಳ ಬಳಕೆ ಬಹುಮುಖ್ಯ ಎಂದು ತಿಳಿಸಿದರು.
Also read: ಮೈಕ್ರೋಗ್ರೀನ್ಸ್ ಎಂದರೇನು? ಬೆಳೆಯುವುದು ಹೇಗೆ? ಕೃಷಿ ವಿದ್ಯಾರ್ಥಿಗಳು ತಿಳಿಸಿದ್ದಾರೆ ಓದಿ…
ರೋಗಗಳನ್ನು ತಡೆಗಟ್ಟುವುದು ಮಾತ್ರವಲ್ಲದೆ ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ. ಸಸ್ಯದ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ಕೃಷಿ ರಾಸಾಯನಿಕ ಮಾಲಿನ್ಯದ ವಾತಾವರಣವನ್ನು ಸುಧಾರಿಸುತ್ತದೆ ಎಂದರು.
ಜೈವಿಕ ನಿಯಂತ್ರಕಗಳಾದ ಟ್ರೈಕೋಡಮರ್, ಸ್ಯೂಡೋಮೊನಾಸ್, ಬ್ಯಾಸಿಲಸ್ ಬೆಲೆ ಕೂಡ ಕಡಿಮೆ ಇದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಕೂಡ ಇದರ ಲಭ್ಯವಿದೆ. ಜೈವಿಕ ನಿಯಂತ್ರಣವನ್ನು ಮುಖ್ಯವಾಗಿ ಸಸ್ಯ ರೋಗಗಳನ್ನು ನಿಯಂತ್ರಿಸಲು ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಪ್ರಯೋಜನಕಾರಿ ಮತ್ತು ಅವುಗಳ ಉತ್ಪನ್ನಗಳ ಮೂಲಕ ಸಸ್ಯಗಳಲ್ಲಿನ ಹಾನಿಕಾರಕ ಜೀವಿಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ ಎಂದು ತಿಳಿಸಿದರು. ಅಡಕೆ ಮತ್ತು ಭತ್ತದ ಸಮಗ್ರ ರೋಗ ನಿರ್ವಹಣೆ ಕುರಿತು ರೈತರೊಂದಿಗೆ ಚರ್ಚಿಸಲಾಯಿತು.
ಊರಿನ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು.
ಸಸ್ಯ ರೋಗಶಾಸ್ತçದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಬಿ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post