ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಶಿವಮೊಗ್ಗ ಹಾಗೂ ರಾಜಧಾನಿ ಬೆಂಗಳೂರು ನಡುವಿನ ರೈಲು ಪ್ರಯಾಣಿಕರಿಗೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ಜೂನ್ 17ರಿಂದ ಹೊಸ ಮೈಲಿಗಲ್ಲು ಆರಂಭವಾಗಲಿದೆ.
ಹೌದು… ಶಿವಮೊಗ್ಗಕ್ಕೆ ಈವರೆಗೂ ಡಿಸೇಲ್ ಇಂಜಿನ್ ರೈಲು ಸಂಚರಿಸುತ್ತಿತ್ತು. ಆದರೆ, ಜೂನ್ 17ರಿಂದ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಲೆಕ್ಟ್ರಿಕಲ್ ಎಂಜಿನ್ ರೈಲು ಸಂಚರಿಸಲಿದೆ.

ಯಾವ ರೈಲುಗಳಿಗೆ ಎಲೆಕ್ಟಿçಕಲ್ ಎಂಜಿನ್?
ಬೆಂಗಳೂರು-ಶಿವಮೊಗ್ಗ ನಡುವಿನ ಜನಶತಾಬ್ದಿ ರೈಲಿಗೆ ಎಲೆಕ್ಟಿçಕಲ್ ಎಂಜಿನ್ ಅಳವಡಿಕೆಯಾಗಲಿದೆ. ಜೂನ್ 17ರಂದು ಬೆಂಗಳೂರಿನಿಂದ ಹೊರಡುವ ರೈಲು ಎಲೆಕ್ಟ್ರಿಕ್ ಇಂಜಿನ್’ನೊಂದಿಗೆ ಶಿವಮೊಗ್ಗಕ್ಕೆ ಬರಲಿದೆ. ಜೂನ್ 18ರಂದು ಶಿವಮೊಗ್ಗದಿಂದ ಹೊರಡುವಾಗ ಎಲೆಕ್ಟ್ರಿಕ್ ಎಂಜಿನ್ ಹೊಂದಿರಲಿದೆ.

ಎಲೆಕ್ಟ್ರಿಕಲ್ ಎಂಜಿನ್’ನಿಂದ ಏನು ಪ್ರಯೋಜನ?
- ವಾಯುಮಾಲಿನ್ಯ ರಹಿತ
- ಶಬ್ದ ಮಾಲಿನ್ಯ ರಹಿತ
- ಸಾಮಾನ್ಯ ವೇಗಕ್ಕಿಂತಲೂ ಅಧಿಕ
- ಪ್ರಯಾಣದ ಅವಧಿ ಇಳಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post