ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ನಿಲ್ದಾಣದ ಬಳಿಯಲ್ಲಿ ನಿನ್ನೆ ಸಂಜೆ ಪತ್ತೆಯಾಗಿದ್ದ ಎರಡು ಅನುಮಾನಾಸ್ಪದ ಪೆಟ್ಟಿಗೆಗಳನ್ನು ಸ್ಪೋಟಿಸಿ ತೆರೆಯಲಾಗಿದ್ದು, ಇದರಲ್ಲಿದ್ದುದು ಪ್ರಾಥಮಿಕ ತನಿಖೆಯಲ್ಲಿ ಅಡಿಗೆ ಉಪ್ಪು ಎಂದು ತಿಳಿದುಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ SP Mithun Kumar ಹೇಳಿದ್ದಾರೆ.
ಈ ಕುರಿತಂತೆ ಮಹತ್ವದ ಹೇಳಿಕೆ ನೀಡಿರುವ ಅವರು, ರೈಲ್ವೆ ನಿಲ್ದಾಣದ ಬಳಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಪೆಟ್ಟಿಗೆಗಳು ಆಟೋ ಚಾಲಕರಿಂದ ಮಾಹಿತಿ ತಿಳಿಯಿತು. ಪೆಟ್ಟಿಗೆಯಲ್ಲಿ ಯಾವುದೇ ರೀತಿಯ ಸ್ಪೋಟಕ ವಸ್ತುಗಳು ಇಲ್ಲದೇ ಇರುವುದನ್ನು ಖಚಿತಪಡಿಸಿಕೊಂಡು, ಬೀಗವನ್ನು ಸ್ಪೋಟಿಸಿ ತೆರೆಯಲಾಗಿದೆ. ಇದರಲ್ಲಿ ಪತ್ತೆಯಾದ ಬಿಳಿ ಪುಡಿ ಪ್ರಾಥಮಿಕ ತನಿಖೆಯಲ್ಲಿ ಅಡಿಗೆ ಉಪ್ಪು ಎಂದು ತಿಳಿದುಬಂದಿದೆ ಎಂದರು.

Also read: ತಡರಾತ್ರಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅವಳಿ ಬಾಕ್ಸ್ ಸ್ಫೋಟ: ಇಷ್ಟಕ್ಕೂ ನಡೆದಿದ್ದೇನು?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post