ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಪಂಚದಲ್ಲಿ ಮೊಟ್ಟ ಮೊದಲ ಕ್ವಿಜ್ ಎಂಬ ಪರಿಕಲ್ಪನೆ ಜನಿಸಿ, ಅದು ಸಾಕಾರಗೊಂಡಿದ್ದು ನಮ್ಮ ಭಾರತದಲ್ಲಿ ಎಂಬುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಥಟ್ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ #Na Someshwar ಹೇಳಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ #Subbaiah Medical College ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಕ್ವಿಜ್ ಮಾಸ್ಟರ್ ಆಗಿ ಪಾಲ್ಗೊಂಡು ಅವರು ಮಾತನಾಡಿದರು.
ರಸಪ್ರಶ್ನೆ #Quiz ಎನ್ನುವ ಪರಿಕಲ್ಪನೆ ನಮ್ಮ ದೇಶದ್ದಾಗಿದ್ದು, ನಮ್ಮ ಪ್ರಶ್ನೋಪನಿಷತ್ ಎಂಬ ಗ್ರಂಥದಿಂದ ಬಂದಿದೆ. ಇದರಲ್ಲಿ ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಬಂದ ಕಲ್ಪನೆ ನಂತರದ ಎಲ್ಲ ಉಪನಿಷತ್’ಗಳಲ್ಲಿ ಇದು ಉಲ್ಲೇಖವಾಗಿವೆ ಎಂದರು.

ಅದೇ ರೀತಿಯಲ್ಲಿ ಭಗವದ್ಗೀತೆಯಲ್ಲಿಯೂ ಸಹ ಕ್ವಿಜ್ ಇದೆ. ಅರ್ಜುನ ಕೇಳುವ ಪ್ರಶ್ನೆಗಳಿಗೆ ಶ್ರೀ ಕೃಷ್ಣ ಉತ್ತರ ನೀಡುತ್ತಾ ಹೋಗುತ್ತಾನೆ ಎಂದರು.
ಇನ್ನು, ವಿದೇಶಗಳಲ್ಲಿ ನೋಡುವುದಾದರೆ ಪಾಶ್ಚಾತ್ಯ ದೇಶಗಳಲ್ಲಿ ಮೊದಲ ಬಾರಿಗೆ ಕ್ವಿಜ್ ನಡೆದಿದ್ದು ಈಡಿಪಸ್ ಕತೆಯಲ್ಲಿದೆ. ತನ್ನ ತಂದೆಯನ್ನು ಕೊಂದು ತಾಯಿಯನ್ನೇ ಮದುವೆಯಾಗಿ ಮಕ್ಕಳನ್ನು ಪಡೆದ ಪರಮ ಪಾಪಿಯೊಬ್ಬನ ಕಥೆಯದೆ. ಆತನ ಊರಿನ ಬಳಿಯಲ್ಲಿ ಓರ್ವ ರಾಕ್ಷಸಿ ಇರುತ್ತಾಳೆ. ಆ ದಾರಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಆಕೆ ಪ್ರಶ್ನೆ ಕೇಳುತ್ತಿರುತ್ತಾಳೆ. ಸರಿ ಉತ್ತರ ನೀಡದವರನ್ನು ತಿನ್ನುತ್ತಿರುತ್ತಾಳೆ. ಅದೇ ದಾರಿಯಲ್ಲಿ ಬಂದ ಈಡಿಪಸ್ ಬಂದಾಗ ಆತನಿಗೂ ಆ ರಾಕ್ಷಸಿ ಕೇಳಿದ ಎಲ್ಲಾ ಪ್ರಶ್ನೆಗೆ ಈಡಿಪಸ್ ಸರಿಯಾದ ಉತ್ತರ ನೀಡುತ್ತಾನೆ. ಹೀಗಾಗಿ, ಆ ರಾಕ್ಷಸಿ ಬೆಟ್ಟದ ಮೇಲಿನಿಂದ ಬಿದ್ದು ಸಾವನ್ನಪ್ಪುತ್ತದೆ. ಸಾಯುವ ಮುನ್ನ ನೀನು ನಿನ್ನ ಊರಿಗೆ ಹೋಗಿ, ನನ್ನನ್ನು ಕೊಂದ ಕಥೆ ಹೇಳು. ನೀನು ರಾಜನಾಗುತ್ತೀಯಾ ಎಂದಿರುತ್ತದೆ. ಅದರಂತೆ, ಊರಿಗೆ ಹೋದ ಆತನನ್ನು ಜನರು ರಾಜನನ್ನಾಗಿ ಮಾಡುತ್ತಾರೆ. ಈಡಿಪಸ್ ಹಾಗೂ ರಾಕ್ಷಸಿ ನಡುವೆ ನಡೆದ ಪ್ರಶ್ನೋತ್ತರವೇ ಪಾಶ್ಚಾತ್ಯ ದೇಶಗಳ ಮೊದಲ ಕ್ವಿಜ್ ಎಂದು ತಿಳಿಸಿದರು.
Also Read: ಕೃಷಿ ವಿವಿ ವಿದ್ಯಾರ್ಥಿಗಳಿಂದ ಭತ್ತ ಬೆಳೆಯುವ ವಿಧಾನಗಳ ಪ್ರಾತ್ಯಕ್ಷಿಕೆ
ಪ್ರಶ್ನೆ ಮತ್ತು ಉತ್ತರ ಎನ್ನುವುದು ಅತ್ಯಂತ ವೈಜ್ಞಾನಿಕ ಸ್ವರೂಪದ್ದಾಗಿದ್ದು, ಓದಿದ್ದನ್ನುನೆನಪಾಗಲು, ನೆನಪಾಗಿದ್ದು ಉತ್ತರಿಸಲು ಪ್ರಶ್ನೋತ್ತರ ಸಹಕಾರಿ. ಇದನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಮಾಡಿದ್ದರು ಎನ್ನುವುದು ನಮ್ಮ ಹೆಮ್ಮೆ ಎಂದರು.
ಕಾಲೇಜಿನ ಡೀನ್ ಡಾ.ವಿನಾಯಕ್ ಮಾತನಾಡಿ, ಇಂದಿನ ರಸಪ್ರಶ್ನೆ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಅತ್ಯಂತ ಸಂತೋಷ ಹಾಗೂ ಗೌರವದ ಸಂಗತಿಯಾಗಿದೆ. ಜ್ಞಾನವನ್ನು ಸನ್ಮಾನಿಸುವ ಮತ್ತು ನಮ್ಮ ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಪರಂಪರೆಯೊಂದಿಗೆ ಶೈಕ್ಷಣಿಕ ಕ್ಷೇತ್ರವನ್ನು ಬೆಸೆಯುವ ಈ ಕಾರ್ಯಕ್ರಮವು ನಿಜಕ್ಕೂ ಮಹತ್ತರವಾದದ್ದಾಗಿದೆ ಎಂದರು.
ನಾವು, ನಮ್ಮ ಸಂಸ್ಥೆ, ಪಠ್ಯ ಪುಸ್ತಕಗಳು ಮತ್ತು ಪರೀಕ್ಷೆಗಳ ಪರಿಮಿತಿಯನ್ನು ಮೀರಿದ ಶಿಕ್ಷಣದ ಮಹತ್ವವನ್ನು ಬೆಳೆಸಲು ನಿಷ್ಠರಾಗಿದ್ದೇವೆ. ವಿಭಿನ್ನ ಆಲೋಚನೆಗಳನ್ನು ಅನ್ವೇಷಿಸುವುದು, ನಾವು ವಾಸಿಸುವ ನೆಲದ ಸಂಸ್ಕೃತಿಗಳನ್ನು ಹಂಚಿಕೊಳ್ಳುವುದು, ಮತ್ತು ಭಾಷೆಗಳ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿದೆ. ರಸಪ್ರಶ್ನೆ ಕಾರ್ಯಕ್ರಮವು ನಮ್ಮ ಕನ್ನಡದ ಹಿರಿಮೆ ಗರಿಮೆಯ ಪತೀಕವಾಗಿದೆ. ಸಾಹಿತ್ಯ ಮತ್ತು ಸಾಧಕರ ಕಿರುಪರಿಚಯ ನಮ್ಮದಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಶೈಕ್ಷಣಿಕ ಮೇಲುಗ್ಗಲ್ಲಾಗಿಸಲು ಇಂತಹ ಕಾರ್ಯಕ್ರಮ ಸಹಾಯಕವಾಗುತ್ತದೆ, ಇದರಿಂದ ವಿದ್ಯಾರ್ಥಿಗಳು ಹಾಗೂ ಅಸಕ್ತರು ಕೇವಲ ಜ್ಞಾನವನ್ನು ಗಳಿಸುವುದಲ್ಲ, ಜಾಗತಿಕ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಸಹ ಅವಕಾಶವನ್ನು ಪಡೆಯುತ್ತಾರೆ.
ಕ್ವಿಜ್ ಸ್ವರೂಪವು ಸ್ವತಃ ನಮ್ಮ ಸಂಸ್ಥೆಯ ಮೌಲ್ಯಗಳ ಪ್ರತಿಬಿಂಬವಾಗಿದೆಬುದ್ಧಿವAತಿಕೆಯ ಕುತೂಹಲ, ತರ್ಕಶಕ್ತಿಯ ಚಿಂತನೆ, ಮತ್ತು ಕಲಿಕೆಯ ಅಭಿಮಾನ. ಇದು ಸಮಾನ ಮನಸ್ಕರುಗಳನ್ನು ಒಟ್ಟು ಸೇರಿಸಿ, ವೈವಿಧ್ಯಮಯ ವಿಷಯಗಳ ಕುರಿತು ಚರ್ಚೆ ಮಾಡಲು ಒಂದು ವೇದಿಕೆ ಕಲ್ಪಸಿದಂತಾಗಿದೆ, ಇಲ್ಲಿ ಹೊಸ ಅಂಶಗಳನ್ನು ಅರಿಯಲು ಮತ್ತು ಪ್ರಶ್ನಿಸುವ ಮನೋವೃತ್ತಿಯನ್ನು ಬೆಳೆಸಲು ಪ್ರೇರೇಪಿಸುತ್ತದೆ ಎಂದರು.
ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯ ಶ್ರೀನಿವಾಸ್ ಮಾತನಾಡಿ, ಚಂದನ ವಾಹಿನಿಯಲ್ಲಿ ನಡೆಯುವ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ತೆರಳಲು ಆಗದೇ ಇರುವವರಿಗೆ ಹಾಗೂ ಜ್ಞಾನ ಪ್ರಸಾರದ ಉದ್ದೇಶದಿಂದ ನಮ್ಮ ಕಾಲೇಜಿನಲ್ಲಿ ಈ ಕ್ವಿಜ್ ಕಾರ್ಯಕ್ರಮ ಆಯೋಜಿಸಿದ್ದೆವು. ನಮ್ಮ ಸಂಸ್ಕಾರ, ಸಂಸ್ಕೃತಿ, ನಾಡು, ಭಾಷೆಯ ಹಿರಿಮೆಯನ್ನು ತಿಳಿಸಲು ಇದು ಸಹಕಾರಿಯಾಗಿದೆ ಎಂದರು.

ಇಂಗ್ಲಿಷ್ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಜನ್ಮತಃ ಅಂಧ ವಿದ್ಯಾರ್ಥಿ ಕೆ. ಅಭಿರಾಮ್ ಭಾಗವತ್ ಅವರು ಲಿಖಿತ ಪರೀಕ್ಷೆ ಬರೆದು, ಸ್ಪರ್ಧಿಯಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಾ. ಸೋಮೇಶ್ವರ ಅವರು ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ರೀತಿಯಲ್ಲಿಯೇ ಇಲ್ಲಿಯೂ ಸಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಸ್ಪರ್ಧೆಗಾಗಿ ಚಂದನ ವಾಹಿನಿಯಲ್ಲಿರುವ ರೀತಿಯಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ವಿಜೇತರಿಗೆ ಸುಮಾರು 150ಕ್ಕೂ ಅಧಿಕ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಸ್ಪರ್ಧಾರ್ಥಿಗಳಿಗೆ ಕಾಲೇಜು ವತಿಯಿಂದ ಭೋಜನ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಪೆಥಾಲಜಿ ವಿಭಾಗದ ಡಾ.ವೈಭವ್ ನಾಯಕ್, ಸಿಮ್ಸ್ ಸಂಸ್ಥೆ ಡಾ. ಶ್ರೀಧರ್, ನರ್ಸಿಂಗ್ ಪ್ರಾಂಶುಪಾಲರಾದ ಡಾ. ವನಮಾಲ ಸತೀಶ್ ಸೇರಿದಂತೆ ಹಲವರು ಇದ್ದರು.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post