ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಕಡೆಯಿಂದ ತಪ್ಪಾಗಿದ್ದು ನಿಜ, ಆದರೆ ಅದನ್ನು ಸರಿಪಡಿಸಿಕೊಳ್ಳುತ್ತಿದ್ದು, ನಮಗೆ ಮೋದಿಯವರು ಮತ್ತೆ ಪ್ರಧಾನಿಯಾಗುವುದಷ್ಟೇ ಮುಖ್ಯ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಕೆಲವೊಂದು ತಪ್ಪುಗಳಾಗಿತ್ತು. ಹೀಗಾಗಿಯೇ, ನಮ್ಮ ಪಕ್ಷ ಸೋಲು ಅನುಭವಿಸಬೇಕಾಯಿತು. ಆದರೆ, ತಪ್ಪುಗಳನ್ನು ಈಗ ಸರಿಪಡಿಸಿಕೊಳ್ಳುತ್ತಿದ್ದೇವೆ ಎಂದರು.
ಪಕ್ಷದಲ್ಲಿ ಅಂಕುಡೊಂಕುಗಳು ಸಹಜ. ಇದನ್ನು ಹಿತೈಷಿಗಳು ತಿಳಿಸಿ ಹೇಳಬೇಕು. ಹಿಂದೆ ಆದ ತಪ್ಪುಗಳನ್ನು ಪರಿಸಿಕೊಂಡು ಮುಂದೆ ಹೋಗುವುದನ್ನು ನಮಗೆ ಪಕ್ಷ ಕಲಿಸಿಕೊಟ್ಟಿದೆ. ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ನಮಗೆ ಮುಖ್ಯ ಎಂದರು.
Also read: ಶಿರಾಡಿಘಾಟ್’ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ | ಅನಿಲ ಸೋರಿಕೆ | ಮಧ್ಯರಾತ್ರಿವರೆಗೂ ಸಂಚಾರ ಬಂದ್
ಸಿದ್ದರಾಮಯ್ಯಗೆ ಟಾಂಗ್
ಪ್ರಧಾನಿ ಮೋದಿ PM Modi ವಿರುದ್ಧ ಮಾತನಾಡುವ ಸಿದ್ದರಾಮಯ್ಯ Siddaramaiah ಅವರೂ ಸೇರಿದಂತೆ ಕಾಂಗ್ರೆಸ್ ಪಕ್ಷ ಎಷ್ಟೇ ಪ್ರಯತ್ನ ಪಟ್ಟರೂ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಮೋದಿ ಏನೆಲ್ಲಾ ಮಾಡಿದ್ದಾರೆ ಎಂದು ದೇಶ, ವಿದೇಶಗಳಿಗೂ ಸಹ ಗೊತ್ತಿದೆ. ಅಲ್ಲದೇ, ಧರ್ಮ ಉಳಿಸಲು ಮೋದಿ ಹಾಗೂ ಅಮಿತ್ ಶಾ Amith Shah ಅವರುಗಳ ಪ್ರಯತ್ನವನ್ನು ದೇಶವೇ ಕಂಡಿದೆ ಎಂದರು.
ಮೋದಿ ಹಾಗೂ ಬಿಜೆಪಿ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರು ಇಷ್ಟಪಟ್ಟಂತೆ ನಾವು ರಾಜಕಾರಣ ಮಾಡಲ್ಲ. ರಾಜಕಾರಣ ಮಾಡುವುದನ್ನು ನಾವು ಅವರಿಂದ ಕಲಿಯುವ ಅವಶ್ಯತೆಯಿಲ್ಲ. ದೇಶದಾದ್ಯಂತ ನಿಮ್ಮ ಪಕ್ಷ ನಿರ್ಮೂಲನೆಯಾಗುತ್ತಿದೆ. ಅದನ್ನು ಮೊದಲು ನೋಡಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ದೇವೇಗೌಡರನ್ನು ಹೊಗಳಿದ ಕೆಎಸ್’ಈ
ಭಾರತದ ಅಭಿವೃದ್ಧಿಯನ್ನು ಕಂಡು ಇಂದು ವಿಶ್ವವೇ ನಮ್ಮೆಡೆಗೆ ನೋಡುತ್ತಿದೆ. ಮೋದಿಯವರಿಗೆ ಅಂದು ವೀಸಾ ನೀಡುವುದಿಲ್ಲ ಎಂದು ಹೇಳಿದ್ದ ದೇಶಗಳು ಇಂದು ರೆಡ್ ಕಾರ್ಪೆಟ್ ಹಾಸಿ ಸ್ವಾಗತ ಮಾಡುತ್ತಿವೆ. ಹೀಗೆ, ಪ್ರಮುಖ ದೇಶಗಳೇ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿರುವಾಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post