ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದಲ್ಲಿ ಹಿಂದೂ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆ ಇಲ್ಲ ಎಂಬುದು ನೇಹಾ ಪ್ರಕರಣದಿಂದ ಸಾಬೀತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ಅಲ್ಪಸಂಖ್ಯಾತರ ಅತಿಯಾದ ತುಷ್ಠೀಕರಣ, ಆರೋಪಿಗಳ ರಕ್ಷಣೆ, ಕೊಲೆ ಮಾಡಿದವರನ್ನು ಬೆಂಬಲಿಸುವುದು, ಇದನ್ನು ಇನ್ನು ಮುಂದೆ ಹಿಂದೂ ಸಮಾಜ ಸಹಿಸುವುದಿಲ್ಲ. ಆರೋಪಿಗಳ ಮೇಲೆ ಕಠಿಣ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಬಹುಸಂಖ್ಯಾತ ಹಿಂದೂ ಸಮಾಜವನ್ನು ರಕ್ಷಿಸುವ ಹೊಣೆ ಸರ್ಕಾರದ್ದು ಎಂದರು.
ಇಂದು ನಮ್ಮ ರಾಷ್ಟç ಭಕ್ತರ ಬಳಗ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನೇಹಾ ಹತ್ಯೆ ಖಂಡಿಸಿದ್ದೇವೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕ ಮನವಿ ನೀಡಿದ್ದೇವೆ. ಹುಬ್ಬಳ್ಳಿಗೆ ತೆರಳಿ ಇಂದು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದೇವೆ ಎಂದರು.
Also read: ಇದೇ ನೋಡಿ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪನವರ ಅಧಿಕೃತ ಚಿನ್ಹೆ
ಈ ಪ್ರಕರಣವನ್ನು ಕಾಂಗ್ರೆಸ್ ಚುನಾವಣೆಗಾಗಿ ದಾಳವಾಗಿ ಬಳಸುತ್ತಿದೆ. ಗೃಹ ಸಚಿವರು ತನಿಖೆಯಾಗುವ ಮೊದಲೇ ಇದು ಲವ್ ಜಿಹಾದ್ ಅಲ್ಲ ಎಂದು ಹೇಳುತ್ತಾರೆ. ಅವರಿಬ್ಬರು ಪ್ರೇಮಿಗಳು ಅನ್ನುತ್ತಾರೆ. ತನಿಖೆ ಆಗುವ ಮುನ್ನವೇ ತೀರ್ಮಾನ ಮಾಡಲು ಇವರು ನ್ಯಾಯಾಧೀಶರೇ ಎಂದರು.
ಬಹುಸಂಖ್ಯಾತ ಹಿಂದೂ ಸಮಾಜ ಆಕ್ರೋಶಕ್ಕೆ ಒಳಗಾಗಿ ಕಾನೂನು ಕೈಗೆ ತೆಗೆದುಕೊಂಡರೆ ಮುಸ್ಲಿಮರ ಕತೆ ಏನಾಗಬಹುದು ಎಂಬುದನ್ನು ಮುಸ್ಲಿಂ ಸಮಾಜದ ಹಿರಿಯ ಮುಖಂಡರು ಕಿಡಿಗೇಡಿ ಯುವಕರಿಗೆ ಬುದ್ಧಿ ಹೇಳಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















