ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಮತ್ತು ಕರ್ನಾಟಕ ಸಂಘ, ಶಿವಮೊಗ್ಗ ಸಂಯುಕ್ತವಾಗಿ ಅರ್ಪಿಸುವ “ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ – ಆವೃತ್ತಿ ಎರಡು” ಪುಸ್ತಕ ಬಿಡುಗಡೆ ಕಾರ್ಯಕ್ರಮ ಏ.11ರ ಶನಿವಾರ ಸಂಜೆ 6 ಗಂಟೆಗೆ, ನಗರದ ಕರ್ನಾಟಕ ಸಂಘದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಐಎಂಎ ರಾಜ್ಯಾಧ್ಯಕ್ಷರಾದ ಡಾ ವೀರಭದ್ರಯ್ಯ ಟಿ ಎ ಆಗಮಿಸಲಿದ್ದಾರೆ.
ಪುಸ್ತಕದ ಕುರಿತು ನಿವೃತ್ತ ಪ್ರಾಂಶುಪಾಲ ಡಾ. ಎಸ್ ನಾಗಮಣಿ ಮಾತನಾಡಲಿದ್ದಾರೆ. ಅತಿಥಿಗಳಾಗಿ, ಡಾ. ಹರೀಶ ದೇಲಂತಬೆಟ್ಟು, ಡಾ. ಅಣ್ಣಯ್ಯ ಕುಲಾಲ್ ಉಳ್ತೂರು, ಡಾ ಹೆಚ್ ಎಸ್ ಮೋಹನ್, ಡಾ. ಕೆ ಆರ್ ರವೀಶ್, ಶ್ರೀ ವಿನಯ್ ಶಿವಮೊಗ್ಗ ಉಪಸ್ಥಿತರಿರುವರು.
ಪ್ರೊ. ಶಂಕರನಾರಾಯಣ ಶಾಸ್ತ್ರಿ, ಅಧ್ಯಕ್ಷರು ಕರ್ನಾಟಕ ಸಂಘ, ಶಿವಮೊಗ್ಗ, ಅಧ್ಯಕ್ಷತೆ ವಹಿಸುವರು. ವಿಶೇಷವಾದ ಈ ಕಾರ್ಯಕ್ರಮಕ್ಕೆ, ಐಎಂಎ ಕಾರ್ಯದರ್ಶಿ ಡಾ ಕೆ ಎಸ್ ಶುಭ್ರತಾ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.
ಈ ಪುಸ್ತಕದಲ್ಲಿನ ನಮ್ಮ ಜಿಲ್ಲೆಯ ಲೇಖಕ/ ಲೇಖಕಿಯರು
ಡಾ ಕೆ ಆರ್ ಶ್ರೀಧರ್, ಡಾ ಹೆಚ್ ಎಸ್ ಮೋಹನ್, ಡಾ ಕೃಷ್ಣ ಎಸ್ ಭಟ್, ಡಾ ರತ್ನಾಕರ್, ಡಾ ಅನುಪಮ ವೈ ಜೆ, ಡಾ ಹರೀಶ ದೇಲಂತಬೆಟ್ಟು, ಡಾ ವೀಣಾ ಭಟ್, ಡಾ ವಿನಯಾ ಶ್ರೀನಿವಾಸ್, ಡಾ ವಿನಯ್ ಪಾಟೀಲ್, ಡಾ ಕೆ ಎಸ್ ಶುಭ್ರತಾ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















