ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದೇಶಿ ಸಂಸ್ಕೃತಿಯಿಂದ ಭಾರತಕ್ಕೆ ಸ್ವಲ್ಪ ದಕ್ಕೆಯಾಗಿದೆ. ಭಗವಂತ ಅವತಾರ ಮಾಡಿದ ದೇಶ ಭಾರತ, ಯಾರೂ ನಮ್ಮನ್ನು ನಾಶಮಾಡಲು ಸಾದ್ಯವಿಲ್ಲ ಇಲ್ಲಿ ಗುರುಶಿಷ್ಯ ಪದ್ಧತಿ ಇನ್ನೂ ಜೀವಂತವಾಗಿ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ತಿಳಿಸಿದರು.
ಅವರು ಶನಿವಾರ ನಗರದ ಬಾಪೂಜಿ ಅಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನವದೆಹಲಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಅನೌಪಚಾರಿಕ ಸಂಸ್ಕೃತ ಅಧ್ಯಯನದ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಭರತನಾಟ್ಯ, ಸಂಗೀತ, ಸಂಸ್ಕೃತ ಇನ್ನೂ ಮುಂತಾದ ವಿದ್ಯೆ ಕಲಿಯುವ ಮುನ್ನ ವಿದ್ಯಾರ್ಥಿಗಳು ಗುರುವಿಗೆ ನಮಸ್ಕರಿಸಿ ತಮ್ಮ ವಿದ್ಯಾಬ್ಯಾಸ ಆರಂಭಿಸುತ್ತಾರೆ ಎಂದರು.

ಇಂತಹ ಸಂಪತ್ಭರಿತವಾದ ಭಾಷೆಯ ಪುನರುಜ್ಜೀವನ ಯಶಸ್ವಿಯಾಗಿ ನಡೆಯುತ್ತ ಮುಂದೆ ಬರುತ್ತಿದೆ. ಇದಕ್ಕಾಗಿಯೇ ದೇಶ ವಿದೇಶದಲ್ಲಿ ಸಂಸ್ಕೃತ ಭಾರತಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ಹಾಗಾಗಿ ಇಂದು ಕೋಟ್ಯಾಂತರ ಜನ ವಯೋಮಿತಿ, ಜಾತಿಬೇದ ವಿಲ್ಲದೆ ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಸಂಸ್ಕೃತ ಭಾರತಿಯ ಚಟುವಟಿಕೆಗಳನ್ನು ಅಭಿನಂದಿಸಿದರು.

ಸಂಸ್ಕೃತ ಕಲಿತರೆ ಇತರೆ ಭಾಷಾ ಜ್ಞಾನಕ್ಕೆ ಉತ್ತಮ ಬುನಾದಿಯಾಗುತ್ತದೆ, ಎಲ್ಲಿ ಸಂಸ್ಕೃತವೊ ಅಲ್ಲಿ ಸಂಸ್ಕೃತಿ, ಎಲ್ಲಿ ಸಂಸ್ಕೃತಿ ನೆಲೆಸುತ್ತದೆಯೋ ಅಲ್ಲಿ ಪ್ರಜೆಗಳು ಅನಂದದಿಂದ ಜೀವನ ನಡೆಸುತ್ತಾರೆ ಎಂದು ಹೇಳಿದರು.

Also read: ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹಕ್ಕೆ ಎಂದಿಗೂ ಚಿರಋಣಿ: ಸಂಗೀತ ನಿರ್ದೇಶಕ ಗುರುಕಿರಣ್
ಪ್ರಾಸ್ತಾವಿಕವಾಗಿ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕರ್ನಾಟಕ ರಾಜ್ಯ ಸಂಯೋಜಕರಾದ ವೆಂಕಟೇಶ ಮೂರ್ತಿ ಮಾತನಾಡಿದರು.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕರಾದ ಸವ್ಯಸಾಚಿ ದಳಪತಿ ಸ್ವಾಗತಿಸಿ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪಂಕಜಕುಮಾರ್ ವಂದಿಸಿದರು.




















Discussion about this post