ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆಗೆ ರಣಕಹಳೆ ಊದಿರುವ ಪ್ರಧಾನಿ ನರೇಂದ್ರ ಮೋದಿ, PM Narendra Modi ಇಂದು ನಗರಕ್ಕೆ ಆಗಮಿಸಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಿವಮೊಗ್ಗದ ಜನತೆಗೆ ನಮಸ್ಕಾರಗಳು ಎಂದು ಮೋದಿಯವರು ಕನ್ನಡದಲ್ಲೇ ಮಾತು ಆರಂಭಿಸಿದರು.
ಅತ್ಯಂತ ಪ್ರಮುಖವಾಗಿ, ಮಲೆನಾಡು ಮಾತ್ರವಲ್ಲ ರಾಜ್ಯ, ದಕ್ಷಿಣ ಭಾರತದಾದ್ಯಂತ ಭಕ್ತರು ಆರಾಧಿಸುವ ಸಿಗಂಧೂರು ಶ್ರೀ ಚೌಡೇಶ್ವರಿ ದೇವಿಯನ್ನು ಪ್ರಧಾನಿ ಸ್ಮರಿಸಿದರು.
Also read: ಗೋ ಸಂರಕ್ಷಣೆ ಮಾಡಿದರೆ ನಾಡಿನ ಸಮಸ್ತ ಸಂಪತ್ತು ವೃದ್ಧಿ: ಪೇಜಾವರ ಶ್ರೀ ಅಭಿಮತ
ಶ್ರೀ ಕ್ಷೇತ್ರ ಸಿಗಂಧೂರು Shri Kshethra Sigandhuru Choudeshwari ಶ್ರೀ ಚೌಡೇಶ್ವರಿ ಶಕ್ತಿ ದೇವತೆಗೆ ನನ್ನ ನಮನಗಳು ಎಂದರು.ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ 28ಕ್ಕೆ 28 ಸ್ಥಾನಗಳನ್ನೂ ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲು ಮತ ನೀಡಬೇಕು ಎಂದು ವಿನಂತಿ ಮಾಡಿದರು.
ಪ್ರಮುಖವಾಗಿ ಈ ಬಾರಿ 400ಕ್ಕೂ ಮೀರಿ ಬಿಜೆಪಿಗೆ ಸೀಟು, ಈ ಬಾರಿ 400ಕ್ಕೂ ಮೀರಿ ಬಿಜೆಪಿಗೆ ಸೀಟು ಎಂದು ಕನ್ನಡದಲ್ಲೇ ಮನವಿ ಮಾಡಿದ್ದು ವಿಶೇಷವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















