ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆಗೆ #Lok Sabha Election ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ #B Y Raghavendra ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದು, ಅಂದಿನಿAದ ನಿರಂತರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಸಿದ ದಿನದಿಂದ ನಿಜವಾದ ಕಣ ಆರಂಭವಾಗಲಿದೆ. ಉಳಿದ 20 ದಿನ ಹಗಲು ರಾತ್ರಿ ಶ್ರಮಿಸುತ್ತೇವೆ ಎಂದರು.
ತಮ್ಮ ಪರವಾಗಿ ಯಾವುದೇ ಸ್ಟಾರ್ ಕ್ಯಾಂಪೇನರ್’ಗಳನ್ನು ಆಹ್ವಾನಿಸುವುದಿಲ್ಲ. ನಮ್ಮ ಪಕ್ಷದ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರೇ ನಮ್ಮ ಸ್ಟಾರ್ ಕ್ಯಾಂಪೇನರ್’ಗಳು. ಇವರುಗಳ ಶ್ರಮದಿಂದಲೇ ನಾವು ಗೆಲ್ಲುತ್ತೇವೆ ಎಂದರು.
Also read: ಯುಪಿಎಸ್’ಸಿ ಸಿವಿಲ್ಸ್ ಫಲಿತಾಂಶ ಪ್ರಕಟ | ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್ ಟಾಪರ್
ನಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post