ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಖಾಸಗಿ ಬಸ್ಸಿನಲ್ಲಿ ಕೋಟ್ಯಂತರ ರುಪಾಯಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಖಾಸಗಿ ಬಸ್ ಕಚೇರಿ ಬಳಿ ಬಸ್ಸು, ಪ್ರಯಾಣಿಕರು ಮತ್ತು ಲಗೇಜ್‌ಗಳ ತಪಾಸಣೆ ನಡೆಸಿರುವ ಘಟನೆ ನಡೆದಿದೆ.
ಮುಂಬೈನಿಂದ ಬರುತ್ತಿರುವ ಬಟ್ಟೆಗಳ ಬಂಡಲ್ ಜೊತೆಗೆ ಕೋಟ್ಯಂತರ ರುಪಾಯಿ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು.
ಶಿವಮೊಗ್ಗ ಮತ್ತು ಭದ್ರಾವತಿಯ ವಿವಿಧ ಜವಳಿ ಅಂಗಡಿಗಳಿಗೆ ಬಂದಿದ್ದ ಬಟ್ಟೆಗಳ ಲೋಡ್ ಕೆಳಗಿಳಿಸಿ ತಪಾಸಣೆ ನಡೆಸಿ, ವಿವಿಧ ಮಳಿಗೆಗಳಿಗೆ ಸೇರಿದ ಸುಮಾರು 8 ಲಕ್ಷ ರೂ. ಮೌಲ್ಯದ ಬಟ್ಟೆಯನ್ನು ಬಸ್ಸಿನಲ್ಲಿ ತರಲಾಗಿತ್ತು. ಇವುಗಳನ್ನು ವಾಣಿಜ್ಯ ತೆರಿಗೆ ಸಿಟಿಒ ಅಧಿಕಾರಿ ನಾಗರಾಜ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post