ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಂಪರಾಗತ ಜ್ಞಾನವನ್ನು ಪಸರಿಸುವ ಮೂಲಕ ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಏರಿಸುವ ಶಕ್ತಿ ಈ ದೇಶದ ಮಹಿಳೆಯರಲ್ಲಿದೆ ಎಂದು ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಸಿನು ಜೋಸ್ ಹೇಳಿದರು.
ಮಹಿಳಾ ಸಮನ್ವಯವು ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾರೀ ಶಕ್ತಿ ಸಂಗಮ ಮಹಿಳಾ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿ, ಸ್ತ್ರೀ ಮೂಲಂ ಸರ್ವ ಧಮರ್ಂ ಎಂದು ಮಹಿಳೆಯನ್ನು ಬಣ್ಣಿಸಲಾಗಿದೆ. ಸ್ತ್ರೀಯರಲ್ಲಿ ದೈವೀ ಶಕ್ತಿ ಇದೆ. ಅದನ್ನು ಸಿದ್ಧಿಸಿಕೊಂಡು ಮುನ್ನಡೆಯಬೇಕಿದೆ ಎಂದರು.

ಋತು ಚಕ್ರದ ಅವಧಿಯಲ್ಲಿ ಭಾರತೀಯ ಮಹಿಳೆಯರು ಅನುಸರಿಸುತ್ತಿದ್ದ ನಿಯಮಗಳ ಬಗ್ಗೆ ಅಧ್ಯಯನ ನಡೆದಿದೆ. ಈ ನಿಯಮಗಳಿಂದ, ಸೇವಿಸುವ ಆಹಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಅಧ್ಯಯನದಿಂದ ದೃಢಪಟ್ಟಿವೆ. ಈ ನಿಯಮಗಳನ್ನು ವಿದೇಶಿಯರು ಇಂದು ಪಾಲಿಸುತ್ತಿದ್ದಾರೆ. ಇದು ವಿಶ್ವಕ್ಕೆ ಭಾರತ ಕೊಡುವ ಜ್ಞಾನ ಎಂದರು.

ಹಿಂದೆ ಮಹಿಳೆಯರು ಕಚ್ಚೆ ಸೀರೆ ಧರಿಸುತ್ತಿದ್ದರು. ಇದರಲ್ಲಿಯೂ ಕೂಡ ವೈಜ್ಞಾನಿಕತೆ ಇದೆ. ಸೊಂಟಕ್ಕೆ ಸೀರೆಯನ್ನು ಹಿತವಾಗಿ ಕಟ್ಟಿಕೊಳ್ಳುವುದರಿಂದ ಮೂಲಾಧಾರ ಚಕ್ರಕ್ಕೆ ಶಕ್ತಿ ಬರುತ್ತದೆ. ಆದರೆ ಇಂದು ಸ್ಕರ್ಟ್‍ನಂತೆ ಸೀರೆ ಧರಿಸಲಾಗುತ್ತದೆ. ಬಳೆ ಅಕ್ಯೂಪಂಚರ್ ಕೆಲಸ ಮಾಡುತ್ತದೆ. ಮಲ್ಲಿಗೆ ಮುಡಿಯುವುದರಿಂದ ಪಿತ್ತಕಾರಕ ಅಂಶ ಕ್ಷೀಣಿಸುತ್ತದೆ. ಮುಡಿದ ಮಲ್ಲಿಗೆ ಬೇಗನೆ ಬಾಡಿದೆ ಎಂದರೆ ದೇಹದಲ್ಲಿನ ಪಿತ್ತ ಕಡಿಮೆಯಾಗಿದೆ ಎಂದರ್ಥ. ಇವೆಲ್ಲವೂ ಭಾರತೀಯ ನಾರಿಯರು ಪರಂಪಾಗತವಾಗಿ ಕಂಡುಕೊಂಡ ಜ್ಞಾನ. ಇದನ್ನು ವಿಶ್ವಕ್ಕೆ ತಿಳಿಸಿ ವಿಶ್ವಗುರುವಾಗಬಹುದೆಂದು ಹೇಳಿದರು.

ಹಕ್ಕಿಪಿಕ್ಕಿ ಸಮುದಾಯದಲ್ಲಿ ನಾನೇ ಮೊದಲ ಇಂಜಿನಿಯರ್. ಹೀಗಾಗಿ ನಮ್ಮ ಸಮುದಾಯದ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ. ಹಕ್ಕಿಪಿಕ್ಕಿ ಸಮುದಾಯದವಳೆಂದು ಹೇಳಿಕೊಳ್ಳಲು ನನಗೆ ಯಾವುದೇ ಅಂಜಿಕೆ ಇಲ್ಲಘಿ. ವನವಾಸಿ ಕಲ್ಯಾಣ ಸಂಸ್ಥೆಯಲ್ಲಿಯೂ ತೊಡಗಿಸಿಕೊಂಡಿರುವುದಾಗಿ ಹೇಳಿದರು.
ವನವಾಸಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದರೆ ಅಲ್ಲಿ ಮಕ್ಕಳು ಇರುತ್ತಿಲ್ಲ. ತಂದೆ,ತಾಯಂದಿರ ಬಳಿಗೆ ಬಂದು ಓದು ನಿಲ್ಲಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹಕ್ಕಿಪಿಕ್ಕಿಗಳ ಮತಾಂತರ ಕೂಡ ಆಗಿದೆ. ಅಂತಹವರನ್ನು ಮರಳಿ ಕರೆತರುವ ಜವಾಬ್ದಾರಿ ಕೂಡ ನನ್ನದಾಗಿದೆ ಎಂದರು.

ಉಪಸ್ಥಿತರಿದ್ದ ವಿಕಾಸ ಟ್ರಸ್ಟ್ ಅಧ್ಯಕ್ಷ ರಂಗನಾಥ ಬಿ.ಎ. ಮಾತನಾಡಿ, ಸ್ತ್ರೀ ಶಕ್ತಿಯನ್ನು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಪ್ರದಾಯ ಹಾಗೂ ಪದ್ಧತಿಗಳನ್ನು ಪ್ರತೀ ಮನೆಮನೆಗಳಿಗೂ ತಲುಪಿಸುವ ಉದ್ದೇಶವಿದೆ ಎಂದರು.
ಪ್ರಸೂತಿ ಮತ್ತು ಸೀ ರೋಗ ತಜ್ಞೆ ಡಾ.ವೀಣಾ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸಹಸಂಚಾಲಕಿ ಶ್ರೀರಂಜನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಪ್ರದರ್ಶಿನಿಗಳನ್ನು ಏರ್ಪಡಿಸಲಾಗಿತ್ತು.









Discussion about this post