ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರ ಮಹಿಳಾ ಮೋರ್ಛಾ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಊರಗಡೂರಿನ ಗುಡ್ಡೇಮರಡಿಯ ಮಲ್ಲೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ಹಾಗೂ ಸಭೆಯನ್ನು ಏರ್ಪಡಿಸಲಾಗಿತ್ತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮಹಿಳಾ ಮೋರ್ಛಾವನ್ನು ಮತ್ತಷ್ಟು ಬಲಗೊಳಿಸಿ, ಮಹಿಳಾ ಕಾರ್ಯಕರ್ತರ ಕಾರ್ಯವೈಖರಿ ಸದಾ ಮಾದರಿ, ಸಂಘಟನೆಯ ಬಲ ವರ್ಧನೆಗೆ ಪೂರಕ ಎಂದು ಹೇಳಿದರು.
ಚೆನ್ನಬಸಪ್ಪರವರು ಪಕ್ಷದ ಇತಿಹಾಸ, ನಡೆದು ಬಂದ ದಾರಿ, ಕಾರ್ಯಕರ್ತರ ಜವಾಬ್ದಾರಿ ಬಗ್ಗೆ ಭೌದ್ಧಿಕ್ ನಡೆಸಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮೋರ್ಛಾ ನಗರಾಧ್ಯಕ್ಷೆ ಸುರೇಖ ಮುರಳೀಧರ್ ವಹಿಸಿದ್ದರು.
ನಗರಾಧ್ಯಕ್ಷರಾದ ಜಗದೀಶ್, ನಿಕಟಪೂರ್ವ ನಗರಾಧ್ಯಕ್ಷ ನಾಗರಾಜ್, ಮಹಾಪೌರರಾದ ಸುನಿತಾ ಅಣ್ಣಪ್ಪ, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಮಾಜಿ ಮಹಾಪೌರರಾದ ಸುವರ್ಣ ಶಂಕರ್, ಮಹಿಳಾ ಮೋರ್ಛಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ, ನಗರ ಪ್ರಭಾರಿ ರಾಧಾ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ಮಹಿಳಾ ಮೋರ್ಛಾ ಪದಾಧಿಕಾರಿಗಳು, ಸದಸ್ಯರು, ವಿವಿಧ ವಾರ್ಡ್ ನ ಮಹಿಳಾ ಮೋರ್ಛಾ ಅಧ್ಯಕ್ಷೆ ಹಾಗೂ ಕಾರ್ಯದರ್ಶಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post