ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೆಸಿಐ ಇಂಡಿಯಾದಿಂದ ರೇಸ್,ರಿಪ್ಲೆಕ್ಷನ್ ಆಫ್ ವುಮನ್ ಎನ್ನುವ ವಿಷಯ ಕುರಿತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಮಾಡಲು ತಿಳಿಸಲಾಗಿತ್ತು ಅದರಂತೆ “ಮಲೆನಾಡಿನ ಹೆಮ್ಮೆಯ ನಾಲ್ಕು ಜನ ಮಹಿಳೆಯರಿಗೆ ಸನ್ಮಾನ” ಹಾಗೂ ಸೆಲಿಬ್ರಿಟಿ ಮೇಕ್‌ಓವರ್ ಆರ್ಟಿಸ್ಟ್ ಆಗಿರುವ ಜೆಸಿ.ಸೌಮ್ಯ ಪಂಚಾಕ್ಷರಿ ಅವರಿಂದ ಬ್ಯೂಟಿಷಿಯನ್ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಕಾರ್ಯಕ್ರಮದ ಛೇರ್ ಪರ್ಸನ್ ಆಗಿದ್ದ ಜೆಸಿ. ಡಾ. ವಿಜಯಶ್ರೀ ಅವರು ತಿಳಿಸಿದರು.
ಮಹಿಳೆಯರು ಎಲ್ಲಾ ರಂಗಗಳಲ್ಲಿಯು ಇದ್ದಾರೆ. ಅತ್ಯುನ್ನತ ಸಾಧನೆಯನ್ನು ಕೂಡ ಮಾಡಿದ್ದಾರೆ ಹೀಗಾಗಿ ಇದನ್ನು ಸ್ಮರಿಸಬೇಕಾದ ಆದ್ಯ ಕರ್ತವ್ಯ ನಮ್ಮದಾಗಿದೆ. ವೇದಿಕೆಗಳು ಅನೇಕ ಆದರೆ ಮಹಿಳೆಯರಿಗಾಗಿ ಮೀಸಲಾಗಿರುವ ವೇದಿಕೆಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಈ ಆಚರಣೆಯು ತಮ್ಮದೇ ಆದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳಾ ವ್ಯಕ್ತಿತ್ವಗಳಿಗೆ ಮನ್ನಣೆ ನೀಡಿದಂತಾಗಿದೆ, ಇಂತಹದೊಂದು ಅವಕಾಶ ಜೆಸಿಐ ಶಿವಮೊಗ್ಗ ಶರಾವತಿ ಘಟಕಕ್ಕೆ ಬಂದಿರುವುದು ಬಹಳ ಸಂತೋಷದಾಯಕ ಸಂಗತಿಯಾಗಿದೆ ಎಂದು ಜೆಸಿ. ಡಾ. ವಿಜಯಶ್ರೀರವರು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಜೆಎಫ್‌ಡಿ ಸ್ವಪ್ನ ಸಂತೋಷ್ ಗೌಡರವರು ಮಾತನಾಡಿ ಮಹಿಳಾ ದಿನಾಚರಣೆಗೂ ಒಂದು ದಿನ ಖಾಯ್ದಿರಿಸಬೇಕು ಎಂದು ಬಹಳ ವರುಷಗಳ ಹೋರಾಟಗಳ ತರುವಾಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಸ್ತುತಗೊಂಡಿದೆ, ಹೀಗೆ ಈ ಕಾಲಘಟ್ಟದಲ್ಲಿ ಅಂತಹದೊಂದು ಹೋರಾಟಗಳು ಇಲ್ಲದೆ ಹೋದರು, ಮಹಿಳಾ ಪ್ರಾಧನ್ಯತೆ ಎಲ್ಲಾ ರಂಗಗಳಲ್ಲಿಯೂ ಲಭಿಸಿದೆ, ಅಲ್ಲದೆ ಅಗ್ರಮುಖಿಯಾಗಿ ಮಹಿಳೆಯರು ತಮ್ಮ ಪ್ರಭುತ್ವವನ್ನು ಸಾಧಿಸಿದ್ದಾರೆ ಎಂದು ಜೆಎಫ್‌ಡಿ ಸ್ವಪ್ನ ಸಂತೋಷ್ ಗೌಡ ಅವರು ವಿವರಿಸಿದರು
Also read: ನಿಪ್ಪಾಣಿ ಟು ಭದ್ರಾವತಿ ಸರ್ಕಾರಿ ಬಸ್’ನಲ್ಲಿ ದಾಖಲೆಯಿಲ್ಲದ ಲಕ್ಷಾಂತರ ರೂ. ನಗದು ವಶ
ಇನ್ನೂ ಇಂದು ಆಯೋಜಿಸಲಾಗಿರುವ ಬ್ಯೂಟಿಷಿಯನ್ ಕಾರ್ಯಗಾರದಲ್ಲಿ ವಿವಿಧೆಡೆಯಿಂದ ಇದರ ಪ್ರಯೋಜನ ಪಡೆಯಲು ಬಂದಿದ್ದೀರಾ ಸದುಪಯೋಗ ಪಡಿಸಿಕೊಳ್ಳಿ ಎಂದರಲ್ಲದೆ ಸೌಂದರ್ಯ ಎಂಬುದು ಹುಟ್ಟಿನ ಕೊಡುಗೆಯಾಗಿದೆ ಮತ್ತು ಒಬ್ಬರಿಂದ ಇನ್ನೊಂದು ಪೀಳಿಗೆಗೆ ಹರಡುತ್ತದೆ. “ಸೌಂದರ್ಯದ ವಿಷಯ ಎಂದೆಂದಿಗೂ ಸಂತೋಷವಾದ ಸಂಗತಿಯಾಗಿದ್ದು ಸಾಕಷ್ಟು ಮಹಿಳೆಯರು ಬ್ಯೂಟಿ ಪಾರ್ಲರ್ ಅಪ್ಲಿಕೇಶನ್‌ನಿಂದ ಉತ್ತಮವಾಗಿ ಕಾಣುವಂತೆ ಬಲು ಉತ್ಸುಕತೆ ಹೊಂದಿರುತ್ತಾರೆ, ಇದು ಈ ಹೊತ್ತಿನ ಅಗತ್ಯತೆ ಕೂಡ ಎಂದರು.
ಕಾರ್ಯಕ್ರಮದಲ್ಲಿ ಜೆಸಿ. ಡಾ.ಸೋನಾಲಿ, ಕಿರುತೆರೆ ನಟಿ ದೀಪಾ, ಸಿರಿ ಮೇಕ್‌ಓವರ್ ಸ್ಟುಡಿಯೋ ಆಗಿರುವ ಜೆಸಿ.ಸೌಮ್ಯ ಪಂಚಾಕ್ಷರಿ, ನೃತ್ಯ ಸಂಯೋಜಕಿ, ಸಿನಿಮಾ ಕಲಾವಿದೆ ಮಾಧುರಿ, ಅವರುಗಳಿಗೆ ಘಟಕದಿಂದ ಸನ್ಮಾನಿಸಲಾಯಿತು, ವೇದಿಕೆಯಲ್ಲಿ ವಲಯ ನಿರ್ದೇಶಕರಾಗಿರುವ ಜೆಸಿ.ಅಶ್ವಿನಿ ಆನಂದ್, ಐಪಿಪಿ ಜೆಸಿ.ಸೌಮ್ಯ ಅರಳಪ್ಪ, ಕಾರ್ಯಕ್ರಮದ ನಿದೇಶಕರು ಜೆಸಿ.ಮಮತಾ ಶಿವಣ್ಣ ಸೇರಿದಂತೆ ಬ್ಯೂಟಿಷಿಯನ್ ತರಬೇತಿ ಪಡೆಯಲು ಬಂದಿದ್ದ ಮಹಿಳೆಯರು ಹಾಗೂ ಘಟಕದ ಜೆಸಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post