ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳೆಯರು ಕೃಷಿ ಮತ್ತು ಕುಟುಂಬ ನಿರ್ವಹಣೆ ಎರಡರಲ್ಲೂ ಪ್ರಮುಖ ಪಾತ್ರ ವಹಿಸುವುದರಿಂದ ಮಹಿಳೆಯರ ಈ ಕಾರ್ಯ ತುಂಬಾ ಶ್ಲಾಘನೀಯವಾಗಿದೆ ಎಂದು ಶಿಕ್ಷಣ ನಿರ್ದೇಶಕರು ಹಾಗೂ ಕೃಷಿ ವಿವಿ ಪ್ರಭಾರ ಕುಲಪತಿಗಳಾದ ಡಾ.ಬಿ. ಹೆಮ್ಲಾನಾಯಕ್ ಪ್ರಶಂಶಿಸಿದರು.
ಕೃಷಿ ನಿರತ ಮಹಿಳಾ ದಿನಾಚರಣೆಯ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಗರದ ಜೀವನಮುಖಿ ಸಂಸ್ಥೆ ಸಂಸ್ಥಾಪಕರಾದ ಪ್ರತಿಭಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಕೃಷಿಯಲ್ಲಿ ಕೆಲಸಗಳನ್ನು ಶ್ಲಾಘಿಸಿದರು.
ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಸಿ. ಸುನಿಲ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ಡೀನ್ ಡಾ. ನಾರಾಯಣ ಮಾವಕರ್ರ, ಕೃಷಿ ಡೀನ್ ಡಾ.ಡಿ. ತಿಪ್ಪೇಶ್, ಕೃಷಿ ಉಪನಿರ್ದೇಶಕರಾದ ಮಂಜುಳಾ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಸಂಜಯ್ ಪಾಲ್ಗೊಂಡಿದ್ದರು. ಡಾ.ಸುಧಾರಣೆ ಅವರು ನಿರೂಪಿಸಿದರು ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಸಿಬ್ಬಂದಿ ವರ್ಗದವರು ಮತ್ತು 150 ರೈತ ಮಹಿಳೆಯರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.

ಕೃಷಿಯಲ್ಲಿ ಮಹಿಳೆಯರ ದಿನವನ್ನು ಡಿಸೆಂಬರ್ 4 ,2018 ರಿಂದ ಪ್ರತಿ ವರ್ಷ ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಪ್ರತಿ ವರ್ಷ ಆಚರಿಸಲು ನಿರ್ಧರಿಸಲಾಗಿದೆ.
ಕೃಷಿಯಲ್ಲಿ ಮಹಿಳೆಯರ ಕೊಡುಗೆಗಳನ್ನು ಗುರುತಿಸುವುದು ಮತ್ತು ಗೌರವಿಸುವುದಾಗಿದೆ ಇದರ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಮಹಿಳೆಯರು ಹೆದರಿಸುವ ಸವಾಲುಗಳನ್ನು ಪರಿಹರಿಸುವುದಾಗಿದೆ.
ಈ ದಿನದಂದು ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಸವಾಲುಗಳು ಮತ್ತು ಅವರ ಕೊಡುಗೆಗಳ ಕುರಿತು ಚರ್ಚಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಕೋಕೋ ಬೆಳೆಯ ಉತ್ಪಾದನೆ, ಸಂಸ್ಕರಣೆ, ಮತ್ತು ಮೌಲ್ಯವರ್ಧನ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ ನವುಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post