ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹವ್ಯಾಸಿ ರಂಗತಂಡಗಳ ಸಂಘ (ಒಕ್ಕೂಟ)ವತಿಯಿಂದ ಕುವೆಂಪು ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಾ.26ರಿಂದ 28ವರೆಗೆ ಶಿವಮೊಗ್ಗ ರಂಗ ಹಬ್ಬ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.27 ರಂಗಭೂಮಿ ದಿನವಾಗಿದ್ದು, ಒಕ್ಕೂಟ ಕಲಾವಿದರ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವು ಕಳೆದ 2 ದಶಕಗಳಿಂದ ರಂಗಚಟುವಟಿಕೆಗಳನ್ನು ಮಾಡುತ್ತ ಬಂದಿದ್ದು, ಈ ವರ್ಷವೂ ಕೂಡ 3 ದಿನಗಳ ಕಾಲ ನಾಟಕೋತ್ಸವವನ್ನು ಆಯೋಜಿಸಿದೆ ಎಂದರು.

ವಿಶ್ವರಂಗದ ದಿನಾಚರಣೆ ಪ್ರಯುಕ್ತ ರಂಗಗೀತೆಗಳ ಗಾಯನ ಕಾರ್ಯಕ್ರಮವು ಇರುತ್ತದೆ. ಮೂರು ದಿನದ ನಾಟಕಗಳು ಪ್ರತಿ ದಿನ ಸಂಜೆ 6.45ಕ್ಕೆ ಆರಂಭವಾಗುತ್ತವೆ ಎಂದರು.

Also read: ಜೈಲು ಹಕ್ಕಿಯಾದ ಸೋನು ಶ್ರೀನಿವಾಸ್ ಗೌಡ | 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ
ಈ ನಾಟಕೋತ್ಸವದಲ್ಲಿ ಸುಮಾರು 150ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಭಾಗವಹಿಸುತ್ತಾರೆ. ಹಾಗೆಯೇ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘವು ವರ್ಷಕ್ಕೆ 10 ತಂಡಗಳಿಂದ ನಾಟಕಗಳನ್ನು ಪ್ರದರ್ಶಿಸುವ ಗುರಿ ಹೊಂದಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post