ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರಕೃತಿಯ ಆರಾಧನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ಹಿರಿಯರು ನಮಗೆ ಕೊಟ್ಟ ಬಳುವಳಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾ ರಿ ನಮ್ಮೆಲ್ಲರದು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಡಾ. ಸುಧೀಂದ್ರ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಚಿಂತನ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪರಿಸರ ನನ್ನ ಅಳಿಲು ಸೇವೆ’ ಕುರಿತು ಸಂಜಯ ಡೊಂಗ್ರೆ, ‘ವನಮಹೋತ್ಸವ’ ಬಗ್ಯೆ ತಿರುಮಲ ಮಾವಿನಕುಳಿ, ‘ಪ್ಲಾಸ್ಟಿಕ್ ಮುಕ್ತ ಪರಿಸರ’ ಕುರಿತು ಸುಧೀಷ್ಣ ಕುಮಾರಿ ಹಾಗೂ ‘ಇರುವುದೊಂದೇ ಭೂಮಿ’ ಎನ್ನುವ ವಿಷಯದಲ್ಲಿ ಶ್ರೀರಂಜಿನಿ ದತ್ತಾತ್ರಿ ಚಿಂತನೆ ನಡೆಸಿದರು.
ಜಿಲ್ಲಾ ಕಾರ್ಯದರ್ಶಿ ಸತ್ಯನಾರಾಯಣ ರಾವ್ ಕಾರ್ಯಕ್ರಮದ ಅವಲೋಕನ ನೆರವೇರಿಸಿದರು. ರಾಜ್ಯಾಧ್ಯಕ್ಷ ಡಾ. ಪ್ರೇಮಶೇಖರ್, ಉಪಾಧ್ಯಕ್ಷ ಗುರುರಾಜ್ ಉಪ್ಪುಂದ, ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್, ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಜಿಲ್ಲಾ ಸಂಯೋಜಕ ಮಹೇಶ್ ಗೋಖಲೆ ಮುಂತಾದ ಪದಾಧಿಕಾರಿಗಳು ಅಂತರ್ಜಾಲದ ಮೂಲಕ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post