ಶಿವಮೊಗ್ಗ: ಪ್ರತಿ ಬದುಕುಗಳು ಆರೋಗ್ಯಕರವಾಗಿರಬೇಕು, ವೃದ್ದಾಪ್ಯದಲ್ಲಿ ಕಾಡುವ ಅನಾರೋಗ್ಯದ ಕಾರಣಕ್ಕಾಗಿ ವೃದ್ದಾಶ್ರಮವನ್ನು ಸೇರದಂತಾಗದಿರಲಿ. ಜೀವಿತದ ಅನಾರೋಗ್ಯ ಅನ್ಯರಿಗೆ ಹೊರೆಯಾಗದಿರಲಿ ಈ ಕಾರಣಕ್ಕಾಗಿಯಾದರು ಯೋಗಾಸನ ಅತ್ಯಗತ್ಯ ಎಂದು ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿ. ಪಲ್ಲವಿಯವರು ಹೇಳಿದರು.
ಅವರು ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ಜೆಸಿಐ ಶಿವಮೊಗ್ಗ ವಿವೇಕ್ ಘಟಕದಿಂದ ಆಲ್ಕೊಳದ “ತಾಯಿಮನೆ:”ಯಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯನ್ನು ಉದ್ದೇಶಿಸಿದ ಮಾತನಾಡುತ್ತಾ ಯೋಗ ಎಲ್ಲಾ ವರ್ಗಗಳನ್ನು ಮೀರಿ ವಿಶ್ವಕ್ಕೆ ಪರಿಚಯಿಸಿ ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಜೂನ್-21 ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಜಗತ್ತಿನಲ್ಲಿ ಘೋಷಿಸಲಾಗಿರುವುದು ಭಾರತದ ಪರಂಪರೆಗೆ ಸಂದ ಗೌರವವೂ ಆಗಿದೆ ಎಂದು ಅವರು ಹೇಳಿದರು.
ವಯಸ್ಸಿನ ಮಿತಿ ಇಲ್ಲದೆ ಯೋಗ ಮಾಡಬಹುದಾಗಿದ್ದು ಆರೋಗ್ಯವನ್ನು ಗಟ್ಟಿಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇತಿಹಾಸವನೊಮ್ಮೆ ಮೆಲಕು ಹಾಕಿದಾಗ ಯೋಗ ಅಂದಿನ ಜೀವನಾಡಿಯಾಗಿತ್ತು ಬರ ಬರುತ್ತಾ ಅದನ್ನು ನಾವು ಮರೆತು ಹೋದ್ವಿ ಆದರೆ ಇದೇ ಯೋಗವನ್ನು ವಿದೇಶಿಯರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರು, ಇದೀಗ ಇತ್ತೀಚಿನ ವರುಷಗಳಲ್ಲಿ ಮತ್ತೇ ಪ್ರಾಚಿನ ಪರಂಪರೆಯ ಯೋಗ ಮತ್ತೆ ನಮ್ಮಗಳ ನಡುವೆ ಮರು ಜೀವಂತಿಕೆಯನ್ನು ಪಡೆಯುತ್ತಿದೆ, ಅರಿವು ಹೆಚ್ಚಾಗುತ್ತಿದೆ ಮರೆತು ಹೋದ ಅನಾದಿ ಪರಂಪರೆಯನ್ನು ನಮ್ಮದೇ ಬದುಕುಗಳಲ್ಲಿ ಅಳವಡಿಡಿಕೊಂಡರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಇದೊಂದು ಅಡಿಗಲ್ಲು ಆಗುತ್ತದೆ ಎಂದು ಜಿ.ಪಲ್ಲವಿ ಹೇಳಿದರು.
ಜೋನ್ ಡೈರೆಕ್ಟರ್ ಭಾರತಿ ರಾಮಕೃಷ್ಣರವರು ಮಾತನಾಡಿ ಯೋಗ ದಿನಾಚರಣೆ ಎಲ್ರೂ ಎಲ್ಲೆಡೆ ಮಾಡುತ್ತಿದ್ದಾರೆ ಆದರೆ ಒಂದಿಷ್ಟು ಸ್ವಂತಿಕೆ,ಸಂತೋಷಗಳನ್ನು ಕಳೆದುಕೊಂಡ ಈ ತಾಯಿಮನೆ ಮಕ್ಕಳ ಜೊತೆ ಯೋಗ ಮಾಡುವುದು ಅವರೊಂದಿಗೆ ಒಂದು ದಿನವನ್ನಾದರು ಅವರ ಸಂತೋಷದಲ್ಲಿ ಪಾಲ್ಗೊಳ್ಳುವುದು ನಮ್ಮಗಳಿಗೆ ಆತ್ಮತೃಪ್ತಿ ತಂದು ಕೊಡುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ತಾಯಿ ಮನೆ ಮಕ್ಕಳಿಗೆ ಹಾಗೂ ಜೆಸಿ ಸದಸ್ಯರಿಗೆ ಯೋಗ ಹೇಳಿಕೊಟ್ಟ ಯೋಗ ಗುರುಗಳಾದ ಮೈನಾ ಹಾಗೂ ಜಯಲಕ್ಷ್ಮಿ ರವರಿಗೆ ಗೌರವವನ್ನು ಸೂಚಿಸಿ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿ. ಪಲ್ಲವಿಯವರಿಗೆ ಮಲ್ಟಿ ಚಾಪ್ಟರ್ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜೋನ್ ಡೈರೆಕ್ಟರ್ ಭಾರತಿ ರಾಮಕೃಷ್ಣ, ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ವಿವೇಕ್ ಅಧ್ಯಕ್ಷರುಗಳಾದ ಜ್ಯೋತಿ ಅರಳಪ್ಪ ಹಾಗೂ ವಿನಯ್ ಆರ್ ಗೌಡ ಕಾರ್ಯದರ್ಶಿ ಶೋಭಾ ಸತೀಶ್ ಯೋಗ ಟ್ರೈನರ್ ಗಳಾದ ಮೈನಾ, ಜಯಲಕ್ಷ್ಮಿ ಹಾಗೂ ಮುಖ್ಯ ಅತಿಥಿಗಳಾದ ಜಿ,ಪಲ್ಲವಿ ರವರುಗಳು ಉಪಸ್ಥಿತರಿದ್ದರು. ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಉಪಾಧ್ಯಕ್ಷರುಗಳಾದ ಮೋಹನ್ ಕಲ್ಪತರು, ದಿವ್ಯಾ ಪ್ರವೀಣ್, ಖಜಾಂಚಿಗಳಾದ ಶಿವಣ್ಣ ಮಂಡ್ಯ, ಜೆಸಿ ಗಾರಾ.ಶ್ರೀನಿವಾಸ್, ಜೆಸಿ ಸುಧಾ, ಜೆಸಿ.ಡಾ.ವಿಸ್ಮೀತಾ, ಜೆಸಿ.ಅಶ್ವಿನಿ ಆನಂದ್ , ಕುಮಾರಿ ಸಂಜನಾ ಎಸ್ ಗಾರಾ ಸೇರಿದಂತೆ ತಾಯಿಮನೆ ಮಕ್ಕಳು ಭಾಗವಹಿಸಿದ್ದರು.









Discussion about this post