ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನೆ ಮನೆಗಳಲ್ಲಿ ಸದಾ ಉತ್ತಮ ಆರೋಗ್ಯ ಇರಲು ಕಾಯಿಲೆಯಿಂದ ಮುಕ್ತರಾಗಿ ಸದಾ ಚಟುವಟಿಕೆಯಿಂದ ಇರಲು ಯೋಗ ಅತ್ಯಂತ್ತ ಪರಿಣಾಮಕಾರಿಯಾದ ಔಷಧ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ. ಕಾಂತೇಶ್ K E Kantesh ಹೇಳಿದರು.
ಇಂದು ಬೆಳಿಗ್ಗೆ ಶಿವಗಂಗ ಯೋಗ ಕೇಂದ್ರ ರಾಘವ ಶಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಳ್ಳಲಾದ ಐದು ದಿನಗಳ ವಿಶೇಷ ಯೋಗ, ಪ್ರಾಣಯಾಮ, ಧ್ಯಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ಮಾತೃಶ್ರೀಗೆ ಆದ ಹಿಪ್ ಜಾಂಟ್ ಹಾಗೂ ಮಂಡಿನೋವಿನ ತೀವ್ರ ತರಹದ ಸಮಸ್ಯೆ ಆಪರೇಷನ್ ಹಂತ ತಲುಪಿತ್ತು ಒಂದು ತಿಂಗಳ ಯೋಗಾಭ್ಯಾಸದ ನಂತರ ಯಾವುದೇ ಆಪರೇಷನ್ ಇಲ್ಲದೇ ಗುಣಮುಖರಾಗಿರುವುದು ತುಂಬಾ ಸಂತೋಷವಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಇಂದು ಪ್ರಪಂಚ 172 ರಾಷ್ಟ್ರಗಳು ಯೋಗವನ್ನು ಒಪ್ಪಿ ನಮ್ಮ ದೇಶಕ್ಕೆ ಬಂದು ಯೋಗವನ್ನು ಅಭ್ಯಾಸ ಮಾಡಿ ವಿದೇಶಿಯರು ಪರಿಣಿತರಾಗುತ್ತಿದ್ದಾರೆ. ಹಾಗಿದ್ದಾಗ ನಮ್ಮ ದೇಶದ ಪಾರಂಪರಿಕ ಯೋಗ ಪದ್ದತಿಯನ್ನು ನಾವೇಕೆ ಅಳವಡಿಸಿಕೊಳ್ಳಬಾರದು. ಪ್ರತಿಯೊಬ್ಬರು ತಪ್ಪದೇ ಇಂತಹ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರಲ್ಲಿ ಪಾಲ್ಗೊಳ್ಳಬೇಕೆಂದು ನುಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಂ.ಎಲ್. ವೈಶಾಲಿ ಪಾಲ್ಗೊಂಡು ಯೋಗಭ್ಯಾಸ ಮಾಡಿ ಮಾತನಾಡುತ್ತಾ ಮಹಿಳೆಯರ ಅನೇಕ ಸಮಸ್ಯೆಗಳಿಗೆ ಯೋಗಭ್ಯಾಸದಲ್ಲಿ ಪರಿಹಾರವಿದೆ. ಇಂತಹ ಒಳ್ಳೆಯ ಕಾರ್ಯಗಳಿಗೆ ನಮ್ಮ ಇಲಾಖೆಯ ಸಹಕಾರ ಎಂದೆಂದೂ ಇರುತ್ತದೆ. ಇನ್ನು ಮುಂದೆ ನಾನು ತಪ್ಪದೇ ಯೋಗಭ್ಯಾಸ ಮಾಡುತ್ತೇನೆ ಎಂದರು.
ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರುದ್ರರಾಧ್ಯರು ವಿಶೇಷ ಆವರ್ತನ ಧ್ಯಾನ ಹಾಗೂ ಸೂರ್ಯನಮಕಸ್ಕಾರ ದ್ಯಾನದ ಲಾಭಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
Also read: ನವೆಂಬರ್ 16, 17, 18 ಬಿಟಿಎಸ್-25 ಬೆಳ್ಳಿ ಹಬ್ಬ ಉದ್ಘಾಟನೆಗೆ ಪ್ರಧಾನಿಗೆ ಆಹ್ವಾನ
ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿಯ ಅಧಿಕಾರಿ ನಂದಿನಿ ಹಾಗೂ ಯೋಗ ಶಿಕ್ಷಕರಾದ ಬಸವರಾಜ್, ಅನುರಾಧ, ವೀಣಾ ಶಿವಕುಮಾರ್, ಮಂಜುಳ, ಜಿ.ಎಸ್. ಒಂಕಾರ್, ವಿಜಯಕೃಷ್ಣ, ಹೆಚ್.ಕೆ. ಹರೀಶ್, ಕಾಟನ್ ಜಗದೀಶ್, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ, ಸಂತೋಷ್, ಕೇಶವ್, ಯೋಗ ಬಂಧುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post