ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಂಜಾಬ್ ರಾಜ್ಯದ ರೋಪರ್ ನಲ್ಲಿರುವ ಲ್ಯಾಮ್ರಿನ್ ಟೆಕ್ ಕೌಶಲ್ಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಐ.ಎಸ್.ಟಿ.ಇ ರಾಷ್ಟ್ರೀಯ ಸಮಾವೇಶ ಹಾಗೂ ಯುವ ಕೌಶಲ್ಯ ಉತ್ಸವದ ನೃತ್ಯ ಸ್ಪರ್ಧೆಯಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ಸಮಿತಿಯ ತಂಡ ಭಾಗವಹಿಸಿ ಎರಡನೇ ರನ್ನರ್ ಅಪ್ ಆಗಿ ಬಹುಮಾನ ಪಡೆದಿದ್ದಾರೆ.
ದೇಶದ ಸುಮಾರು 22 ರಾಜ್ಯಗಳಿಂದ ನೃತ್ಯ ತಂಡಗಳು ಭಾಗವಹಿಸಿದ್ದವು. ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ವಿನಿತ.ಆರ್, ಅಪೂರ್ವ ಹರೀಶ್, ಶರಧಿ. ಎಚ್.ಆರ್, ಶಶಿಧರ್ .ಆರ್.ಎ, ಧನ್ಯಶ್ರೀ ಎಂ.ವಿ, ಸ್ಪಂದನ ಎಸ್. ನಾಯರ್ ತಂಡ ಭಾಗವಹಿಸಿದ್ದರು. ಐ.ಎಸ್.ಟಿ.ಇ ಸಂಯೋಜಕ ಶ್ರೀನಿವಾಸ. ವಿ, ಸಾಂಸ್ಕೃತಿಕ ಸಮಿತಿಯ ಸಂಯೋಜಕ ಮಧುಸೂದನ್. ಜಿ, ಹರೀಶ್ ಮಾರ್ಗದರ್ಶನ ನೀಡಿದ್ದಾರೆ.
Also read: A great tribute to the Khanjira Maestro LAYA BRAHMA Sri. G.Harishankar
ವಿದ್ಯಾರ್ಥಿಗಳ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post