ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿವಿ #Kuvempu VV ಎನ್‌ಎಸ್‌ಎಸ್ ಘಟಕ ಹಾಗೂ ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ 2047 ರ ವೇಳೆಗೆ 1 ಲಕ್ಷ ಜಾಗೃತ ಯುವ ನಾಯಕರನ್ನು ಗುರುತಿಸುವ ಉದ್ದೇಶಕ್ಕಾಗಿ ಯುವ ಸಂಸತ್ (ಯೂತ್ ಪಾರ್ಲಿಮೆಂಟ್) ಯುವ ಧ್ವನಿಯನ್ನು ದಾಖಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಮತ್ತುಸಹ ಪ್ರಾಧ್ಯಾಪಕರಾದ ಡಾ. ಶುಭ ಮರವಂತೆ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಜಕೀಯ ವ್ಯವಸ್ಥೆ ಜಿಡ್ಡುಗಟ್ಟಿ ಹೋಗಿದೆ ಅದನ್ನು ಸರಿಮಾಡಲು ರಾಜಕೀಯದಲ್ಲಿ ಯುವಕರು ಭಾಗವಹಿಸಬೇಕು. ಭವಿಷ್ಯದ ಭಾರತ ಯುವಕರ ಕೈಯಲ್ಲಿ ಹೇಗಿರಲಿದೆ, ಹಾಗೆಯೇ ದೇಶದ ಬಗ್ಗೆ ಯುವಕರ ಚಿಂತನೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದುಕೊಳ್ಳಲು ನರೇಂದ್ರ ಮೋದಿಯವರ ಆಶಯದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಭಾಗವಹಿಸಲು ಇಚ್ಚಿಸುವವರು 1 ನಿಮಿಷದ ವಿಡಿಯೋ ಮಾಡಿ ಮೈ ಭಾರತ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಕುವೆಂಪು ವಿಶ್ವವಿದ್ಯಾಲಯವನ್ನು ನೋಡೆಲ್ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಎಲ್ಲಾ ಯುವಕ/ಯುವತಿಯರು ಈ ವಿಕಸಿತ ಭಾರತ್ ಯುವ ಸಂಸತ್ತಿನಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ಮಾ.9 ಒಳಗಾಗಿ ನೋಂದಣಿ ಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಡಾ. ಶುಭ ಮರವಂತೆ
ಈ ಕಾರ್ಯಕ್ರಮಕ್ಕೆ 18 ರಿಂದ 25 ವರ್ಷದ ಯುವಕ ಯುವತಿಯರು ಮೈ ಭಾರತ್ ಪೋರ್ಟಲ್ ನಲ್ಲಿ ಒಂದು ನಿಮಿಷದ ನಿಮ್ಮ ಆಡಿಯೋ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ವಿಡಿಯೋವು ಗರಿಷ್ಠ 25 ಎಂಬಿ ಯ ಒಳಗಿರಬೇಕು. ಭಾಷಣವು ಬಹುಭಾಷಾ ಆಗಿರಬಹುದು ಕನ್ನಡ, ಹಿಂದಿ, ಇಂಗ್ಲಿಷ್ ಯಾವುದೇ ಮಾತೃ ಭಾಷೆಯಲ್ಲಿಯಾದರೂ ವಿಡಿಯೋ ಮಾಡಬಹುದು ಎಂದರು.
Also read: ಮಾ.9ರಂದು ಕೆಡಬ್ಲ್ಯೂಜೆ ಸರ್ವ ಸದಸ್ಯರ ಸಭೆ | ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ
ವಿಡಿಯೋ ಅಪ್ಲೋಡ್ ಮಾಡಲು ಕೊನೆಯ ದಿನಾಂಕ ಮಾ.09 ಆಗಿದ್ದು, ವಿಡಿಯೋದ ಆರಂಭದಲ್ಲಿ ನಿಮ್ಮ ಹೆಸರು ಜಿಲ್ಲೆಯ ಹೆಸರು ರಾಜ್ಯದ ಹೆಸರು ನೊಡಲ್ ಸೆಂಟರ್ ಹೆಸರು ಇರಬೇಕು. ಇದರಲ್ಲಿ ಅತ್ಯುತ್ತಮ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮಾ.14, 15 ರಂದು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲಾ, ನೊಡಲ್ ಸೆಂಟರ್ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಪರ್ಧೆ ನಡೆಸಲಾಗುವುದು. ಅಂದು ಬೆಳಿಗ್ಗೆ 9.30 ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಜರಿರಬೇಕು ಎಂದರು.
ನAತರ ಇಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಇಲ್ಲಿಂದ 3 ಜನರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು, ಅಂತಿಮ ಹಂತದಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ 2ಲಕ್ಷ, ದ್ವಿತೀಯ 1.5 ಲಕ್ಷ, ತೃತೀಯ 1 ಲಕ್ಷ ನೀಡಲಾಗುವುದು, ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಭಾರತದ ಸಂಸತ್ ಭವನದಲ್ಲಿ ಮಾತನಾಡುವ ಅವಕಾಶ ಪಡೆಯುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಹೆಚ್. ಕೇಶವ್, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಾ.ಟಿ. ಅವಿನಾಶ್,
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಕನ್ನಡ ಸಹ ಪ್ರಾಧ್ಯಾಪಕ ಡಾ. ಪ್ರಕಾಶ್ ರ‍್ಗನಳ್ಳಿ, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post